ಮದ್ಲೂರ: ಸಾಮೂಹಿಕ ವಿವಾಹಗಳಿಂದ ಹೆಚ್ಚಿನ ಲಾಭ

7

ಮದ್ಲೂರ: ಸಾಮೂಹಿಕ ವಿವಾಹಗಳಿಂದ ಹೆಚ್ಚಿನ ಲಾಭ

Published:
Updated:

ಬೆನಕಟ್ಟಿ(ತಾ.ಸವದತ್ತಿ): ‘ಹಬ್ಬ ಗಳ ನೆಪದಲ್ಲಿ ನಡೆಯುವ ಸಾಮೂಹಿಕ ವಿವಾಹಗಳಿಂದಗ್ರಾಮೀಣ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ’  ಎಂದು ಮುನವಳ್ಳಿಯ ಮುರುಘೇಂದ್ರ ಸ್ವಾಮೀಜಿ ಹೇಳಿದರು.

ಅವರು ಸಮೀಪದ ಮದ್ಲೂರ ಗ್ರಾಮದ ಶ್ರೀ ಬೀರಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ಮಾತನಾಡಿದರು. ‘ಸರ್ವ ಧರ್ಮಿಯರು ನವ ವಧುವರರಿಗೆ ಶುಭ ಕೋರುವುದು ವಿಶೇಷ’ ಎಂದರು.

ಗೊರವನಕೊಳ್ಳದ ಶಿವಾನಂದ ಸ್ವಾಮೀಜಿ, ಗೊರಗುದ್ದಿಯ ತುಕಾರಾಮ ಮಹಾರಾಜರು, ಜಗಮನಿ ಅಜ್ಜನವರು, ಬಸಯ್ಯ ಪೂಜೇರ ಸಮ್ಮುಖ ವಹಿಸಿದ್ದರು. ಎಪಿಎಂಸಿ ಸದಸ್ಯ ಪ್ರಕಾಶ ನರಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಬಾಬುಸಾಬ್ ಪರಾಶಿ, ಷಡಕ್ಷರಿ ಮುರಗೋಡ, ಫಕೀರಪ್ಪ ಕುರಿ, ಲಕ್ಷ್ಮಣ ಹೊಟ್ಟಿ, ವಿಠ್ಠಲ ಗೌಡರ, ಪುಂಡಲೀಕ ಉಪ್ಪಾರ, ಪುಂಡಲೀಕ ಕಲ್ಲೋಳಿ, ಶಂಕರೆಪ್ಪ ಕುರಿ, ಹಣಮಂತಗೌಡ ಪಾಟೀಲ, ದಾವಲಸಾಬ್ ಚಪ್ಟಿ, ಪುಂಡಲೀಕ ಮೇಟಿ, ದ್ಯಾಮಣ್ಣ ಗೊಗ್ಗಿ, ಲಕ್ಷ್ಮಣ ಗೊಡಕುಂದರಗಿ, ನಾಗಪ್ಪ ಸಾಲಿ, ದೇವರೇಶ ದೊಡವಾಡ, ಕಲ್ಲೋಳೆಪ್ಪ ಉಪ್ಪಾರ ಇದ್ದರು. ಬಸವರಾಜ ಮನಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ದ್ಯಾಮಣ್ಣ ಮಾದರ ಸ್ವಾಗತಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry