ಭಾರತ ಟೆನಿಸ್‌ ತಂಡಕ್ಕೆ ನೈಶಾ ಆಯ್ಕೆ

7

ಭಾರತ ಟೆನಿಸ್‌ ತಂಡಕ್ಕೆ ನೈಶಾ ಆಯ್ಕೆ

Published:
Updated:
ಭಾರತ ಟೆನಿಸ್‌ ತಂಡಕ್ಕೆ ನೈಶಾ ಆಯ್ಕೆ

ಬೆಂಗಳೂರು: ಕರ್ನಾಟಕದ ಪ್ರತಿಭಾನ್ವಿತ ಆಟಗಾರ್ತಿ ನೈಶಾ ಶ್ರೀವಾಸ್ತವ್‌ ಅವರು ಏಷ್ಯಾ ಒಸೀನಿಯಾ ವಿಶ್ವ ಜೂನಿಯರ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ 14 ವರ್ಷದೊಳಗಿನವರ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಏಪ್ರಿಲ್‌ 1ರಿಂದ 8ರವರೆಗೆ ಬ್ಯಾಂಕಾಕ್‌ನಲ್ಲಿ ಚಾಂಪಿಯನ್‌ಷಿಪ್‌ ನಡೆಯಲಿದೆ. 2016ರಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ 12 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ನೈಶಾ ಪ್ರಶಸ್ತಿ ಗೆದ್ದಿದ್ದರು.

ಬೆಂಗಳೂರಿನ ಟೆನಿಸ್‌ ಅಡ್ವಾಂಟೇಜ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ನೈಶಾ, 14 ವರ್ಷದೊಳಗಿನವರ ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನ ಹೊಂದಿದ್ದಾರೆ. ಇವರಿಗೆ ಕೋಚ್‌ ಧ್ಯಾನ್‌ ಉತ್ತಪ್ಪ ಮಾರ್ಗದರ್ಶನ ನೀಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry