‘ಎಸ್‌ಎಇ ಏರೋ ಡಿಸೈನ್’ ಸ್ಪರ್ಧೆ

7
ಏರೋ ಮಣಿಪಾಲ್ ತಾಂತ್ರಿಕ ಸಂಸ್ಥೆಯ ತಂಡದ ವಿಶಿಷ್ಟ ಸಾಧನೆ

‘ಎಸ್‌ಎಇ ಏರೋ ಡಿಸೈನ್’ ಸ್ಪರ್ಧೆ

Published:
Updated:
‘ಎಸ್‌ಎಇ ಏರೋ ಡಿಸೈನ್’ ಸ್ಪರ್ಧೆ

ಉಡುಪಿ: ಫ್ಲೋರಿಡಾದಲ್ಲಿ ಇತ್ತೀಚೆಗೆ ನಡೆದ ‘ಎಸ್‌ಎಇ ಏರೋ ಡಿಸೈನ್’ ಸ್ಪರ್ಧೆಯಲ್ಲಿ ಏರೋ ಮಣಿಪಾಲ್ ತಾಂತ್ರಿಕ ಸಂಸ್ಥೆಯ (ಎಂಐಟಿ) ಏರೋ ಎಂಐಟಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರವಾಗಿದೆ. ಸಮಗ್ರ ವಿಷಯದಲ್ಲಿ 7ನೇ ಸ್ಥಾನವನ್ನು ಪಡೆದಿದೆ. ಒಟ್ಟು 25 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಭಾರತೀಯ ತಂಡಗಳಲ್ಲಿಯೇ ಅತ್ಯುತ್ತಮ ತಂಡ ಎಂಬ ಪ್ರಶಂಸೆಯನ್ನೂ ತನ್ನದಾಗಿಸಿಕೊಂಡಿದೆ.

‘ಏರೋ ಎಂಐಟಿ’ ಅಂತರ್ ಶಿಸ್ತೀಯ ವಿಭಾಗಗಳ ವಿದ್ಯಾರ್ಥಿಗಳ ತಂಡವಾಗಿದ್ದು, ಸೂಕ್ಷ್ಮ ವೈಮಾನಿಕ ಸಾಧನ ವಿನ್ಯಾಸ ಹಾಗೂ ಆಧುನಿಕ ಡ್ರೋನ್ ತಂತ್ರಜ್ಞಾನ ಆವಿಷ್ಕಾರದಲ್ಲಿ ತೊಡಗಿದೆ. ‘ಹೊಸ ಸವಾಲುಗಳಿಗೆ ಉಪಾಯಗಳನ್ನು ಕಂಡುಹಿಡಿಯುವಲ್ಲಿ ನಮ್ಮ ತಂಡ ಬಹುತೇಕ ಯಶಸ್ವಿಯಾಗಿದೆ. ಕೆಲವು ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಆದ್ದರಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಎಲ್ಲರ ಶ್ರಮಕ್ಕೆ ಉತ್ತಮ ಫಲಿತಾಂಶ ಸಿಕ್ಕಿದೆ’ ಎಂದು ಮೆಕ್ಯಾನಿಕಲ್ ಎಂಜಿನಿ ಯರಿಂಗ್ ವಿದ್ಯಾರ್ಥಿ ಆಗಿರುವ ತಂಡದ ನಾಯಕ ಅಮರ್ಥ್ಯ ಗುಪ್ತ ತಿಳಿಸಿದ್ದಾರೆ.

ಸಮರ್ಥ ಅಗರ್‌ವಾಲ್, ಕೌಶಿಕ್ ಚವಲಿ. ಗ್ರೈನ್ ಡಿಸೋಜ, ವಿಷ್ಣು ಪ್ರಿಯತಮ್. ಅದಿತ್ಯ ರಮೇಶ್, ಗಿಲ್ಬರ್ಟ್‌ ಸೋಯಸ್‌, ಜೋಯಲ್ ಡಿಸೋಜ, ಲಾವಣ್ಯ ವಿಜ್, ಅಶ್ವಿನಿ ವರ್ಕೆ, ಗೌತಮ್ ಮೆನನ್, ಆರೋನ್ ಸಿಕ್ವೇರ, ಕಿರಣ್ ಲೂಕ್, ಭಾನು ಪ್ರಕಾಶ್, ಶಕ್ತಿ ಹಬೀಬ್, ಜೋಶ್ವಾ ಜೋಸ್, ಕೌಸ್ತುಭ ಭುಜ್‌ಬಲ್, ಶುಭಂ ದತ್ತ, ಅಮೇಯ ಶಹಾನೆ, ಉಲ್ಲಾಸ್ ಭಟ್, ಆಶ್ಲೆ ಮೊದಲಿಯಾರ್, ಅಂಜಯ್ ಸುಬ್ರಮಣಿಯನ್ ತಂಡದ ಇತರ ಸದಸ್ಯರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry