ನೀತಿ ಸಂಹಿತೆ: ವಿವಿಧೆಡೆ ಬ್ಯಾನರ್‌ ತೆರವು

7

ನೀತಿ ಸಂಹಿತೆ: ವಿವಿಧೆಡೆ ಬ್ಯಾನರ್‌ ತೆರವು

Published:
Updated:
ನೀತಿ ಸಂಹಿತೆ: ವಿವಿಧೆಡೆ ಬ್ಯಾನರ್‌ ತೆರವು

ರಬಕವಿ- ಬನಹಟ್ಟಿ: ದಿನ ನಿತ್ಯ ನಗರದ ಅನೇಕ ಕಡೆಗಳಲ್ಲಿ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಕಿದ್ದ ಬ್ಯಾನರ್‌ ಮತ್ತು ಪೋಸ್ಟರ್‌ಗಳನ್ನು ನಗರಸಭೆಯ ಪೌರ ಕಾರ್ಮಿಕರು ಮಂಗಳವಾರ ತೆರವುಗೊಳಿಸಿದರು.

ಫ್ಲೆಕ್ಸ್‌ ಹಾಗೂ ಪೋಸ್ಟರ್‌ಗಳಿಂದಾಗಿ ನಗರದ ಬಹಳಷ್ಟು ರಸ್ತೆಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದವು. ಈಗ ನಗರಸಭೆಯ ಪೌರಾಯುಕ್ತ ಆರ್‌.ಎಂ. ಕೊಡಗೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅವಳಿ ನಗರದಲ್ಲಿ ಹಾಕಲಾಗಿದ್ದ ಎಲ್ಲ ಫ್ಲೆಕ್ಸ್‌ಗಳನ್ನು ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸಿದರು.

ಗೋಡೆ ಬರಹ ಅಳಿಸಲಾಗುವುದು: ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಅವಳಿ ನಗರದ ಬಹುತೇಕ ಕಡೆಗಳಲ್ಲಿ ಎಲ್ಲ ಪಕ್ಷಗಳು ಮನೆಗಳ ಗೋಡೆಗಳಲ್ಲಿ ಬರೆದಿರುವ ಪ್ರಚಾರ ಚಿತ್ರ, ಚಿನ್ಹೆ ಹಾಗೂ ಬರಹಗಳನ್ನೂ ಸಹಿತ ಅಳಿಸಲಾಗುವುದು. ಇನ್ನೂ ಮುಂದೆ ನಗರಸಭೆಯ ಅನುಮತಿಯಿಲ್ಲದೆ ಬ್ಯಾನರ್ ಸೇರಿದಂತೆ ಯಾವುದೆ ರೀತಿಯ ಪ್ರದರ್ಶನ ನಡೆಸಬಾರದು ಸೂಚಿಸಿದ್ದಾರೆ.

ಸಿಬ್ಬಂದಿ ಕಾರ್ಯಾಚರಣೆ

ಸಾವಳಗಿ: ಚುನಾವಣೆ ಆಯೋಗದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪಿಡಿಒ ಗಿರಿಶ ಕಡಕೋಳ ನೇತೃತ್ವದ ಪಂಚಾಯ್ತಿ ಸಿಬ್ಬಂದಿ ಗ್ರಾಮದಲ್ಲಿನ ಸುಮಾರು 20ಕ್ಕೂ ಹೆಚ್ಚು ಬ್ಯಾನರ್‌ ತೆರವುಗೊಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪಕ್ಷದ ಹಾಗೂ ರಾಜಕೀಯ ನಾಯಕರ ಭಾವಚಿತ್ರ, ಫ್ಲೆಕ್ಸ್‌ ಹಾಗೂ ಬ್ಯಾನರ್‌ ಅಳವಡಿಸುವಂತಿಲ್ಲ. ಇನ್ನು ಮುಂದೆ ನೀತಿ ಸಂಹಿತೆ ಮುಗಿಯುವವರೆಗೆ ಯಾವುದೇ ರಾಜಕೀಯ ಬ್ಯಾನರ್‌ ಗಳಿಗೆ ಪಂಚಾಯ್ತಿಯಿಂದ ಪರ ವಾನಗಿ ನೀಡುವುದಿಲ್ಲ. ಯಾರಾದರೂ ಕಾನೂನು ಉಲ್ಲಂಘಿಸಿದರೆ ಚುನಾವಣೆ ಆಯೋಗದಿಂದ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry