ಆ ಎರಡು ಗಂಟೆಗಳು...

7

ಆ ಎರಡು ಗಂಟೆಗಳು...

Published:
Updated:
ಆ ಎರಡು ಗಂಟೆಗಳು...

‘ಈ ಸಿನಿಮಾ ಹೀಗೊಂದು ದಿನ ಬೆಳಿಗ್ಗೆ ಆರು ಗಂಟೆಗೆ ಶುರುವಾಗಿ ಎಂಟು ಗಂಟೆಗೆ ಮುಗಿದುಬಿಡುತ್ತದೆ’ ಎಂದು ‘ಹೀಗೊಂದು ದಿನ’ ಚಿತ್ರದ ಬಗ್ಗೆ ಕುತೂಹಲದ ಬೀಜ ಬಿತ್ತಿದರು ನಿರ್ದೇಶಕ ವಿಕ್ರಮ್ ಯೋಗಾನಂದ್‌.‌

ಯಾವುದೇ ದೃಶ್ಯ ತುಣುಕುಗಳನ್ನು ಕತ್ತರಿಸದೇ ಉಳಿಸಿಕೊಂಡ ಅನ್‌ಕಟ್‌ ಸಿನಿಮಾ ಇದು ಎಂದೂ ಅವರು ತಮ್ಮ ಚಿತ್ರಕ್ಕೆ ಕೊಟ್ಟಿರುವ ಭಿನ್ನತೆಯ ಟಚ್‌ ಕುರಿತು ವಿವರಿಸಿದರು. ಇದೇ ವಾರ (ಮಾರ್ಚ್‌ 30) ಚಿತ್ರ ತೆರೆಗೆ ಬರಲಿದೆ.

‘ಇದು ಮಹಿಳಾ ಪ್ರಧಾನ ಚಿತ್ರ. ಸಿಂಧೂ ಲೋಕನಾಥ್‌ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಸುತ್ತ ಮಿತ್ರ, ಶೋಭರಾಜ್‌, ನಾಗೇಂದ್ರ ಶಾ, ಗಿರಿಜಾ ಲೋಕೇಶ್‌ ಅವರ ಪಾತ್ರಗಳು ಹೆಣೆಯಲ್ಪಟ್ಟಿವೆ. ಆಯಾ ಸಮಯಕ್ಕೆ ಹೊಂದುವಂಥ ವಾತಾವರಣದಲ್ಲಿಯೇ ಚಿತ್ರೀಕರಣ ನಡೆಸಿದ್ದೇವೆ’ ಎಂದರು ನಿರ್ದೇಶಕ ವಿಕ್ರಮ್‌.

‘ಮಹಿಳಾ ಪ್ರಧಾನ ಚಿತ್ರ ಅಂದಾಕ್ಷಣ ಇದು ಬರೀ ಸಂದೇಶವನ್ನು ಪ್ರಧಾನವಾಗಿರಿಸಿಕೊಂಡಿರುವ ಸಿನಿಮಾ ಅಲ್ಲ. ಇದೊಂದು ಕಾಮಿಡಿ ಡ್ರಾಮಾ. ವೃತ್ತಿಬದುಕು ಮತ್ತು ವೈಯಕ್ತಿಕ ಬದುಕು ಈ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಲು ಹೊರಡುವ ಹುಡುಗಿಯ ಕಥೆ ಇದು’ ಎಂದರು ನಾಯಕಿ ಸಿಂಧೂ ಲೋಕನಾಥ್‌.

ಚಿತ್ರಕ್ಕೆ ಚಂದ್ರಶೇಖರ್‌ ಹಣ ಹೂಡಿದ್ದಾರೆ. ಅಭಿಲಾಷ್ ರಾಜ್‌ ಸಂಗೀತ ಸಂಯೋಜಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry