ಅಜೀರ್ಣ?

7

ಅಜೀರ್ಣ?

Published:
Updated:

‘ಸಿ.ಎಂ.ಗೆ ತಿಂದ ಅನ್ನ ಅರಗುವುದಿಲ್ಲ’ (ಪ್ರ.ವಾ., ಮಾರ್ಚ್‌ 12).

ಬಿಜೆಪಿಯನ್ನು ಟೀಕಿಸದಿದ್ದರೆ, ‘ಸಿದ್ದರಾಮಯ್ಯನವರಿಗೆ ತಿಂದ ಅನ್ನ ಅರಗುವುದಿಲ್ಲ!’ ಎಂದು ಕೆ.ಎಸ್‌. ಈಶ್ವರಪ್ಪನವರ ಟೀಕೆ.

ನಿಜವಾಗಿದ್ದರೆ, ಇದು ‘ಅನ್ನಭಾಗ್ಯ’ವನ್ನು ಜಾರಿಗೆ ತಂದುದರ (ಕರ್ಮ) ಫಲವೇ ಸರಿ! ರಾಗಿಮುದ್ದೆಯನ್ನು ತಿಂದರೂ ಅರಗುವುದಿಲ್ಲವೆ, ಈಶ್ವರಪ್ಪನವರೆ? (‘ಮುದ್ದೆ ಭಾಗ್ಯ’ ಇಲ್ಲವಲ್ಲ!)

ತಾವು ಇನ್ನೂ ‘ಗಟ್ಟಿ ಮುಟ್ಟಾಗಿ’ರುವುದಾಗಿ ಒಂದೆಡೆ ಹೇಳಿಕೊಂಡಿದ್ದಾರೆ, ಸಿದ್ದರಾಮಯ್ಯ. ಆದ್ದರಿಂದ ಅವರು ಕಲ್ಲು ತಿಂದು ಬೇಕಾದರೂ ಅರಗಿಸಿಕೊಳ್ಳಬಲ್ಲರು! (ಅಂದಹಾಗೆ, ‘ಅನ್ನಭಾಗ್ಯ’ದ ಅಕ್ಕಿಯಲ್ಲಿ ಬಹಳಷ್ಟು ಕಲ್ಲುಗಳು ಎಂದು ದೂರು: ಕಾಳಿಗೊಂದು ಕಲ್ಲು?)

– ಸಿ.ಪಿ.ಕೆ., ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry