ರತ್ನಪ್ರಭಾ ಅವಧಿ 3 ತಿಂಗಳು ವಿಸ್ತರಣೆ

7

ರತ್ನಪ್ರಭಾ ಅವಧಿ 3 ತಿಂಗಳು ವಿಸ್ತರಣೆ

Published:
Updated:
ರತ್ನಪ್ರಭಾ ಅವಧಿ 3 ತಿಂಗಳು ವಿಸ್ತರಣೆ

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಸೇವಾವಧಿಯನ್ನು 2018ರ ಜೂನ್‌ 30ರವರೆಗೆ ವಿಸ್ತರಿಸಲಾಗಿದೆ. ಇದೇ 31ರಂದು ಅವರು ವಯೋ ನಿವೃತ್ತಿಯಾಗಬೇಕಿತ್ತು.

ಅವರ ಸೇವಾವಧಿಯನ್ನು ಮೂರು ತಿಂಗಳು ವಿಸ್ತರಿಸಲು ನಿರ್ಣಯ ಕೈಗೊಂಡಿದ್ದ ರಾಜ್ಯ ಸಚಿವ ಸಂಪುಟ ಸಭೆ, ಈ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸುವಂತೆ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ಪ್ರಸ್ತಾವನೆ ಕಳುಹಿಸಿತ್ತು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಮುಖ್ಯಕಾರ್ಯದರ್ಶಿಯನ್ನು ಬದಲಾವಣೆ ಮಾಡುವುದು ಸಮಂಜಸವಾಗುವುದಿಲ್ಲ ಎಂದೂ ಸರ್ಕಾರ ಪ್ರತಿಪಾದಿಸಿತ್ತು.

ರಾಜ್ಯದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿರುವ ಡಿಒಪಿಟಿ, ಸರ್ಕಾರಕ್ಕೆ ಪತ್ರವನ್ನು ಗುರುವಾರ ರವಾನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry