‘ಸಮಾಜದಲ್ಲಿ ರಂಗಭೂಮಿ ಪಾತ್ರ ಪ್ರಮುಖ’

7
ಜಹಗೀರಗುಡದೂರು ಪ್ರೌಢಶಾಲೆಯಲ್ಲಿ ನಾಟಕ ಪ್ರದರ್ಶನ

‘ಸಮಾಜದಲ್ಲಿ ರಂಗಭೂಮಿ ಪಾತ್ರ ಪ್ರಮುಖ’

Published:
Updated:
‘ಸಮಾಜದಲ್ಲಿ ರಂಗಭೂಮಿ ಪಾತ್ರ ಪ್ರಮುಖ’

ಹನುಮಸಾಗರ: ರಂಗಭೂಮಿ ಅತ್ಯಂತ ಪವಿತ್ರ ಸ್ಥಳ. ಸಮಾಜದ ಅಂಕುಡೊಂಕು ತಿದ್ದುವಲ್ಲಿ ಹಾಗೂ ಸಮಾಜದ ಉತ್ತಮ ಕಾರ್ಯಗಳನ್ನು ಎತ್ತಿ ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮುಖ್ಯ ಶಿಕ್ಷಕ ಈಶಪ್ಪ ತಳವಾರ ಹೇಳಿದರು.ಸಮೀಪದ ಜಹಗೀರಗುಡದೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ಮಕ್ಕಳ ನಾಟಕ ಉದ್ಘಾಟಿಸಿ ಮಾತನಾಡಿದರು.

ರಂಗಶಿಕ್ಷಕ ಗುರುರಾಜ ಮಾತನಾಡಿ, ರಂಗಭೂಮಿ ಜೀವನ ಮೌಲ್ಯಗಳನ್ನು ಕಲಿಸುತ್ತದೆ. ಇಂದಿನ ದಿನಮಾನದಲ್ಲಿ ತುಡಿತವಿಲ್ಲದೆ ಬದುಕುವವರಿಗೆ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ರಂಗಭೂಮಿ ನೀಡುತ್ತದೆ. ಪ್ರತಿ ಗಳಿಗೆ ಜೀವಂತಿಕೆಯಿಂದ ಬದುಕುವ ಕಾರ್ಯವಾಗಬೇಕು ಎಂದು ತಿಳಿಸಿದರು. ಶಿಕ್ಷಕ ಮರಿಯಪ್ಪ ಜರಕುಂಟಿ ಮಾತನಾಡಿದರು. ಜಗದೀಶ್, ಶ್ರೀದೇವಿ ಗುಳಬಾಳ, ತಿಪ್ಪಣ್ಣ ರಾಮದುರ್ಗ, ಪ್ರಶಾಂತ ಕಟ್ಟಿ ಇದ್ದರು. ಗುರುರಾಜ ಅವರು ನಿರ್ದೇಶಿಸಿದ ‘ಆಹಾರ’ ನಾಟಕವನ್ನು ಎಂಟನೇ ತರಗತಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry