ಅಮಿತಾಭ್‌ ಈಗ ಋಷಿ

7

ಅಮಿತಾಭ್‌ ಈಗ ಋಷಿ

Published:
Updated:
ಅಮಿತಾಭ್‌ ಈಗ ಋಷಿ

ತೆಲುಗು ಸಿನಿರಂಗದ ಬಹುನಿರೀಕ್ಷಿತ ಚಿತ್ರ ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸುತ್ತಿರುವ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಅವರು ಚಿತ್ರದಲ್ಲಿ ತಮ್ಮ ಪಾತ್ರದ ಕೆಲ ಫೋಟೊಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ತೆಲುಗಿನ ಮೆಗಾಸ್ಟಾರ್‌ ಚಿರಂಜೀವಿ ಹಾಗೂ ಅಮಿತಾಭ್‌ ಅವರು ಒಟ್ಟಾಗಿ ತೆರೆ ಹಂಚಿಕೊಳ್ಳಲಿರುವುದು ವಿಶೇಷ.

ಈ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಅಮಿತಾಭ್‌ ಬಚ್ಚನ್‌ ಅವರು ತಮ್ಮ ಫೋಟೊಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಈ ಫೋಟೊಗಳ ಕೆಳಗೆ ‘ಸೈ ರಾ...!! ನರಸಿಂಹ ರೆಡ್ಡಿ.. ಚಿರಂಜೀವಿ ಅವರ ಜೊತೆ ನಟಿಸಲು ಖುಷಿ ಮತ್ತು ಹೆಮ್ಮೆ ಎನಿಸುತ್ತಿದೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ಅಮಿತಾಭ್‌ ಅವರು ಬಿಳಿ ಉದ್ದ ಗಡ್ಡ ಬಿಟ್ಟ ಋಷಿಗುರುಗಳ ಪಾತ್ರದಲ್ಲಿ ನಟಿಸಿದಂತಿದೆ. ಮತ್ತೊಂದು ಟ್ವೀಟ್‌ನಲ್ಲಿ ತಮ್ಮ ಮುಖದ ಕ್ಲೋಸಪ್‌ ಚಿತ್ರಗಳನ್ನು ಹಂಚಿಕೊಂಡಿರುವ ಅವರು ‘ನಿರ್ವಾಣ...ಹಿಮಾಲಯ ಕರೆಯುತ್ತಿದೆ’ ಎಂದು ಅಡಿಬರಹ ಕೊಟ್ಟಿದ್ದಾರೆ.

ಈ ಚಿತ್ರವನ್ನು ಸುರೇಂದರ್‌ ರೆಡ್ಡಿ ಅವರು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರ ರಾಯಲಸೀಮೆ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜೀವನ ಕತೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ರಾಮ್‌ ಚರಣ್‌, ನಯನತಾರಾ, ಕಿಚ್ಚಸುದೀಪ್‌, ವಿಜಯ್‌ ಸೇತುಪಥಿ, ಜಗಪತಿ ಬಾಬು ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry