ಪಾಠ ಕಲಿಯಲಿ

6

ಪಾಠ ಕಲಿಯಲಿ

Published:
Updated:

ಜಾಗತಿಕ ಕ್ರಿಕೆಟ್‌ನ ಅನಭಿಷಕ್ತ ದೊರೆಯಾಗಿ ಮೆರೆದ ಆಸ್ಟ್ರೇಲಿಯನ್ನರ ಮೋಸದಾಟ ಈಗ ದೊಡ್ಡ ಸುದ್ದಿಯಾಗಿದೆ. ಎದುರಾಳಿ ಆಟಗಾರರನ್ನು ನೇರವಾಗಿ ಮಣಿಸಲು ಆಗದಿದ್ದಾಗ, ಅವರನ್ನು ಹೀಯಾಳಿಸಿ, ಕಿಚಾಯಿಸಿ, ಅವರ ಏಕಾಗ್ರತೆಗೆ ಧಕ್ಕೆ ತಂದು ಮೋಸದಿಂದ ಗೆಲುವು ಸಾಧಿಸುತ್ತಿದ್ದರು. ಈಗ ಅವರ ಕರಾಳ ಮುಖ ಜಗತ್ತಿನ ಎದುರು ಅನಾವರಣಗೊಂಡಿದೆ.

ಇದರಿಂದ ಆಸ್ಟ್ರೇಲಿಯನ್ನರ ಘನತೆಗೆ ಕುಂದು ಬಂದಿದೆ. ಕೆಲವು ಕ್ರಿಕೆಟಿಗರ ಭವಿಷ್ಯ ಮಸುಕಾಗಿದೆ. ಆದರೆ ಇದರಿಂದ ಆಸ್ಟ್ರೇಲಿಯಾದ ಆಟಗಾರರು ಪಾಠ ಕಲಿತು, ತಿದ್ದಿಕೊಳ್ಳಬೇಕು. ತಮ್ಮ ನಡೆ ಸರಿಪಡಿಸಿಕೊಂಡು, ನಿಜವಾದ ಕ್ರೀಡಾಸ್ಫೂರ್ತಿ ಮೆರೆಯುವ ಮೂಲಕ ಅಭಿಮಾನಿಗಳ ಮನ ಗೆಲ್ಲಬೇಕು.

→ ಡಾ. ಜ್ಞಾನೇಶ್ವರ ಕೆ.ಬಿ., ಹುಬ್ಬಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry