7

‘ಕಲೆಯಿಂದ ಸಹಜೀವನ ಸಾಧ್ಯ’

Published:
Updated:
‘ಕಲೆಯಿಂದ ಸಹಜೀವನ ಸಾಧ್ಯ’

ಮಂಗಳೂರು: ‘ಭಾರತೀಯ ಲಲಿತಕಲೆಗಳ ಅಭ್ಯಾಸ, ಅಸ್ವಾದನೆಯಿಂದ ಸಹಜೀವನ, ಸಹಬಾಳ್ವೆಗೆ ಸಹಕಾರಿ ಎಂದು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಚಂದ್ರಶೇಖರ ನಾವಡ ಹೇಳಿದರು.ಮಂಗಳಾದೇವಿಯ ಮಾತೃ ಕೃಪಾ ಸಭಾಂಗಣದಲ್ಲಿ ಈಚೆಗೆ ನಡೆದ ಕೊಲ್ಯ ನಾಟ್ಯನಿಕೇತನ ಇದರ 60ರ ಸಂಭ್ರಮದ ಮಾಸಿಕ ನೃತ್ಯ ಮಾಲಿಕೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲಾ ಮಕ್ಕಳನ್ನು ಒಂದೇ ಸೂರಿನಡಿ ತಯಾರು ಮಾಡುವಾಗ ಅವರಲ್ಲಿ ಪರಸ್ಪರ ಪ್ರೀತಿ ಅನ್ಯೋನ್ಯತೆ ಬೆಳೆಯುತ್ತದೆ. ಆಗ ಸಮಾಜದಲ್ಲಿ ಸಾಮರಸ್ಯ ಉಂಟಾಗಲು ಸಾಧ್ಯ. ನಾಟ್ಯನಿಕೇತನವು ಕಳೆದ 60 ವರ್ಷದಲ್ಲಿ ಅತ್ಯಂತ ಪ್ರಬುದ್ಧ ಕಲಾವಿದರನ್ನು, ನೃತ್ಯ ಶಿಕ್ಷಕರನ್ನು ಸಮಾಜಕ್ಕೆ ನೀಡಿ, ಜಿಲ್ಲೆಯಲ್ಲಿ ನೃತ್ಯ ಕಲೆಯ ಶ್ರೀಮಂತಿಕೆಗೆ ಮೂಲ ಕಾರಣವಾಗಿದೆ‘ ಎಂದರು. ಇದೇ ಸಂದರ್ಭದಲ್ಲಿ ನಾಟ್ಯಾಚಾರ್ಯ ಗುರು ಉಳ್ಳಾಲ್ ಮೋಹನ್ ಕುಮಾರ್‌ ಗಣೇಶ್ ವಾಸುದೇವ್ ಅವರನ್ನು ಸನ್ಮಾನ ಮಾಡಿದರು.

ಶೋಭಾ ಬೋಳಾರ್, ಅಂಬಿಕಾ ಅಶೋಕ್, ಪ್ರೇಮ್ ಕುಮಾರ್, ಕಿಶೋರ್, ಸರೋಜ, ಗಾಯತ್ರಿ ಇದ್ದರು. ಶ್ರೀಧರ ಹೊಳ್ಳ ಸ್ವಾಗತಿಸಿದರು.  ರಾಜಶ್ರೀ ವಂದಿಸಿದರು. ನೇಹಾ ಬೇಕಲ್ ಪ್ರಾರ್ಥಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry