ಭಾನುವಾರ, ಡಿಸೆಂಬರ್ 15, 2019
23 °C

ಬೇಸಿಗೆಯ ಬೇಗೆಗೆ ಸೌತೇಕಾಯಿ ಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಸಿಗೆಯ ಬೇಗೆಗೆ ಸೌತೇಕಾಯಿ ಮದ್ದು

ಬೇಸಿಗೆಯಲ್ಲಿ ಸೆಖೆ, ಬೆವರು, ಮೈ ಉರಿಯಿಂದ  ಕಿರಿಕಿರಿಯಾಗುವುದು ಸಹಜ. ವಾತಾವರಣದಲ್ಲಿ ಉಷ್ಣತೆ ಹೆಚ್ಚಿರುವುದರಿಂದ ಆಹಾರ ಸೇವನೆಯೂ ಕಷ್ಟ. ಹಾಗಾಗಿ ಸುಲಭವಾಗಿ ಜೀರ್ಣವಾಗುವ ಸೌತೇಕಾಯಿ ಬೇಸಿಗೆಗೆ ಉತ್ತಮ ಆಯ್ಕೆ.

ಇದರಲ್ಲಿ ವಿಟಮಿನ್ ಎ, ಬಿ, ಸಿ, ಇ, ಪೊಟ್ಯಾಷಿಯಂ, ಕಬ್ಬಿಣಾಂಶ ಹಾಗೂ ಅತಿ ಹೆಚ್ಚು ನೀರಿನಾಂಶ ಇರುವುದರಿಂದ ಬೇಸಿಗೆಯಲ್ಲಿ ಸೌತೇಕಾಯಿ ಸೇವಿಸಿದರೆ ಪ್ರಯೋಜನ ಹೆಚ್ಚು.

* ಸೌತೇಕಾಯಿಯಲ್ಲಿ ನೀರಿನಾಂಶ ಹೆಚ್ಚಿರುವುದರಿಂದ ಬೇಸಿಗೆಯಲ್ಲಿ ದಾಹ ಕಡಿಮೆ ಮಾಡುತ್ತದೆ.

* ಬೇಸಿಗೆಯಲ್ಲಿ ದೇಹದ ತಾಪಮಾನದಲ್ಲಿ ಏರುಪೇರಾಗುತ್ತದೆ. ಸೌತೇಕಾಯಿಯನ್ನು ಸೇವಿಸಿದರೆ ದೇಹದ ತಾಪಮಾನ ನಿಯಂತ್ರಣದಲ್ಲಿರುತ್ತದೆ. ಬಿಸಿಲಿನಲ್ಲಿ ಕೆಲಸ ಮಾಡುವವರು ಸೌತೇಕಾಯಿ ಸೇವನೆ ಮಾಡಿದರೆ ದೇಹ ತಂಪಾಗಿರುತ್ತದೆ.

* ಬೇಸಿಗೆಯಲ್ಲಿ ಪಚನ ಶಕ್ತಿ ಕಡಿಮೆ ಇರುತ್ತದೆ. ಸೌತೇಕಾಯಿ ಸುಲಭವಾಗಿ ಜೀರ್ಣವಾಗುತ್ತದೆ. ಇದು ರಾತ್ರಿ ದೇಹ ನಿರ್ಜಲೀಕರಣ ಆಗದಂತೆ ತಡೆಯುತ್ತದೆ. ಆದರೆ ರಾತ್ರಿ ಹೊತ್ತು ಸೌತೇಕಾಯಿ ಹೆಚ್ಚು ಸೇವಿಸಬಾರದು.

* ಬೇಸಿಗೆಯಲ್ಲಿ ಸೌಂದರ್ಯದ ಕಾಳಜಿ ಮಾಡುವವರು ಸೌತೇಕಾಯಿ ಹಾಗೂ ಮೊಸರನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಹಚ್ಚಿ, ಕೈಯಲ್ಲಿ ಮೃದುವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಮುಖ ತೊಳೆಯಿರಿ. ಒಣ ಚರ್ಮದವರಿಗೆ ಇದು ಬಹಳ ಪ್ರಯೋಜನಕಾರಿ.

* ಬಿಸಿಲಿಗೆ ಕಣ್ಣು ಉರಿ ಇದ್ದಾಗ ಸೌತೇಕಾಯಿಯನ್ನು ವೃತ್ತಾಕಾರದಲ್ಲಿ ಕತ್ತರಿಸಿ ಕಣ್ಣಿಗಿಟ್ಟುಕೊಂಡರೆ ಆರಾಮವೆನಿಸುತ್ತದೆ.

* ಮಲಬದ್ಧತೆಗೆ ಸೌತೇಕಾಯಿ ಉತ್ತಮ ಪರಿಹಾರ. ಹಸಿವಾದಾಗ ಸೌತೇಕಾಯಿ, ಕ್ಯಾರೆಟ್ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.

* ಬೊಜ್ಜು, ಮಧುಮೇಹ, ರಕ್ತದೊತ್ತಡ ಕಾಯಿಲೆಯವರಿಗೆ, ಮೂಳೆ ಆರೋಗ್ಯಕ್ಕೆ ಸೌತೇಕಾಯಿ ಉತ್ತಮ.

ಪ್ರತಿಕ್ರಿಯಿಸಿ (+)