‘ನಾನಿನ್ನೂ ಹುಡುಗಿ’

ಭಾನುವಾರ, ಮಾರ್ಚ್ 24, 2019
27 °C

‘ನಾನಿನ್ನೂ ಹುಡುಗಿ’

Published:
Updated:
‘ನಾನಿನ್ನೂ ಹುಡುಗಿ’

ಬಾಲಿವುಡ್‌ನ ಬೇಬಿಡಾಲ್ ಅಲಿಯಾ ಭಟ್‌ ಇತ್ತೀಚೆಗೆ ತಮ್ಮ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಇದರ ಜೊತೆಜೊತೆಗೆ ಇತ್ತೀಚೆಗೆ ‘ಮೋಸ್ಟ್ ಸ್ಟೈಲಿಶ್‌ ವುಮೆನ್‌’ ಎಂಬ ಬಿರುದಿಗೂ ಪಾತ್ರರಾದರು.

ಮುಂಬೈನಲ್ಲಿ ಈಚೆಗೆ ನಡೆದ ‘ಜಿಕ್ಯೂ ಸ್ಟೈಲ್ ಅವಾರ್ಡ್‌’ ಸಮಾರಂಭದಲ್ಲಿ ಅಲಿಯಾಗೆ ಈ ಬಿರುದು ನೀಡಲಾಯಿತು.

‘ಆಲ್ ಬಾಯ್ಸ್ ಕಬ್ಲ್‌ನಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ. ಆದರೆ ನನ್ನನ್ನು ಇವರು ಮಹಿಳೆ (ವುಮೆನ್) ಎಂದು ಗುರುತಿಸಿದ್ದಾರೆ. ಇದರಿಂದ ಸ್ವಲ್ಪ ಬೇಸರವೂ ಆಗುತ್ತಿದೆ. ‘ಹುಡುಗಿಗೆ 25 ವರ್ಷವಾದ ಮೇಲೆ ಮಹಿಳೆ ಆಗುತ್ತಾಳೆ, ಆದರೆ ಹುಡುಗ ಮಾತ್ರ ಸದಾ ಹುಡುಗನಾಗಿಯೇ ಇರುತ್ತಾನೆ. ಇದ್ಯಾವ ಸೀಮೆ ನ್ಯಾಯ? ನಾನಿನ್ನೂ ಹುಡುಗಿ, ಮಹಿಳೆಯಲ್ಲ’ ಎನ್ನುವುದು ಅಲಿಯಾ ವಾದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry