ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲ್ಕೊಗೆ ‘ವಿಶ್ವ ಸಾಮಾಜಿಕ ಉದ್ಯಮ’ ಪ್ರಶಸ್ತಿ

ಇಂಗ್ಲೆಂಡಿನಲ್ಲಿ ಪ್ರಶಸ್ತಿ ‍ಪ್ರದಾನ ಸಮಾರಂಭ
Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡಾ.ಹರೀಶ್‌ ಹಂದೆ ಅವರ ‘ಸೆಲ್ಕೊ ಸಂಸ್ಥೆ’ಗೆ, ಇಂಗ್ಲೆಂಡಿನ ಸ್ಕೂಲ್ ಫೌಂಡೇಶನ್‌ ವತಿಯಿಂದ ಜಾಗತಿಕ ಮಟ್ಟದಲ್ಲಿ ನೀಡುವ ‘ವಿಶ್ವ ಸಾಮಾಜಿಕ ಉದ್ಯಮ ಸ್ಕೂಲ್‌’ ಪ್ರಶಸ್ತಿ ಲಭಿಸಿದೆ.

ಸಾಮಾಜಿಕ ಉದ್ಯಮಶೀಲತೆಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಬಡತನ ನಿವಾರಣೆಗೆ ಸುಸ್ಥಿರ ಶಕ್ತಿಯ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದ್ದಕ್ಕಾಗಿ ಸೆಲ್ಕೊ ಸಂಸ್ಥೆಯನ್ನು ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಂಗ್ಲೆಂಡಿನಲ್ಲಿ ಏಪ್ರಿಲ್ 12ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಸಂಸ್ಥೆಯ ಎಲ್ಲ ಕಾರ್ಯಚಟುವಟಿಕೆಗಳಿಗೆ ಮುಂದಿನ ಮೂರು ವರ್ಷಗಳವರೆಗೆ ಸ್ಕೂಲ್ ಫೌಂಡೇಶನ್‌ ಬೆಂಬಲ ನೀಡಲಿದೆ.  ಸಂಸ್ಥೆಗೆ ಈ ಹಿಂದೆ ಮ್ಯಾಗ್ಸೆಸೆ ಹಾಗೂ ಜಾಯೇದ್‌ ಪ್ರಶಸ್ತಿ ಸಹ ಲಭಿಸಿತ್ತು.

‘ಈ ಪ್ರಶಸ್ತಿಯಿಂದಾಗಿ ನನ್ನ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ನವೀಕರಿಸಬಹುದಾದ ಇಂಧನದ ಮೂಲಕ ಬಡತನ ನಿವಾರಣೆ ಸಾಧ್ಯ ಎಂಬುದನ್ನು ತೋರಿಸಲು ಇನ್ನಷ್ಟು ಕೆಲಸ ಮಾಡಲಿದ್ದೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದು ಹಾಗೂ ಅವರ ಬದುಕು ಸುಧಾರಣೆ ಮಾಡಲು ಈ ಪ್ರಶಸ್ತಿಯು ಸಹಕಾರಿ ಆಗಲಿದೆ’ ಎಂದು ಹರೀಶ್ ಹಂದೆ ತಿಳಿಸಿದರು.
**
ಜಗತ್ತಿನ ಹಲವು ದೇಶಗಳ 2,000 ಉದ್ಯಮಿಗಳು ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಅದರಲ್ಲಿ ಆರು ಮಂದಿ ಅಂತಿಮ ಘಟ್ಟಕ್ಕೆ ತಲುಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT