ಬಿಜೆಪಿಗೆ ಕಾರ್ಯಕರ್ತರ ಸೇರ್ಪಡೆ

7

ಬಿಜೆಪಿಗೆ ಕಾರ್ಯಕರ್ತರ ಸೇರ್ಪಡೆ

Published:
Updated:

ಲಕ್ಷ್ಮೇಶ್ವರ: ಸಂಸದ ಶಿವಕುಮಾರ ಉದಾಸಿ ಹಾಗೂ ಮಾಜಿ ಶಾಸಕ ರಾಮಣ್ಣ ಲಮಾಣಿ ಅವರ ಸಮ್ಮುಖದಲ್ಲಿ ಕುಂದ್ರಳ್ಳಿ ತಾಂಡಾದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ದೀಪಕ ಲಮಾಣಿ, ಪರಮೇಶ್ವರಪ್ಪ ಹತ್ತಾಳ ಸೇರಿ 20ಕ್ಕೂ ಹೆಚ್ಚು ಜನ ಬಿಜೆಪಿಗೆ ಸೇರ್ಪಡೆ ಆದರು.‘ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳು ಜನರನ್ನು ಆಕರ್ಷಿಸುತ್ತಿವೆ. ದೇಶದಲ್ಲಿ ಬಿಜೆಪಿಯತ್ತ ಜನ ಬರುತ್ತಿದ್ದಾರೆ. ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣ ಮಾಡಲು ಪ್ರಧಾನಿ ಮುಂದಾಗಿದ್ದಾರೆ’ ಎಂದು ಸಂಸದ ಶಿವಕುಮಾರ ಉದಾಸಿ ಎಂದರು.

ಸಣ್ಣವೀರಪ್ಪ ಹಳ್ಳೆಪ್ಪನವರ, ತಾಲ್ಲೂಕು ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಅಣ್ಣಿಗೇರಿ, ಸುಭಾಷ ಬಟಗುರ್ಕಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಪರಶುರಾಮ ಇಮ್ಮಡಿ, ವಿಶ್ವನಾಥ ಕಪ್ಪತ್ತನವರ, ಮಹಾಂತೇಶ ಹಳ್ಳೆಪ್ಪನವರ, ಶಿವಯೋಗಿ ಅಂಕಲಕೋಟಿ, ನಿಂಬಣ್ಣ ಮಡಿವಾಳರ, ದುಂಡೇಶ ಕೊಟಗಿ, ನಾಗರಾಜ ಕುಲಕರ್ಣಿ, ಪ್ರಕಾಶ ಬೆಂತೂರ, ಶಿವಣ್ಣ ಲಮಾಣಿ, ಗಂಗಾಧರ ಮೆಣಸಿನಕಾಯಿ, ನಾಗರಾಜ ಲಕ್ಕುಂಡಿ, ನಿಂಗಪ್ಪ ಪ್ಯಾಟಿ, ನೀಲಪ್ಪ ಹತ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry