ಸೋಮವಾರ, ಆಗಸ್ಟ್ 10, 2020
26 °C

ಹೆಣ್ಣು ಚಿರತೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಣ್ಣು ಚಿರತೆ ಸೆರೆ

ಬೆಂಗಳೂರು: ತಾವರೆಕೆರೆ ಸಮೀಪದ ಹಾಲುಬಾವಿಪಾಳ್ಯದ ಹತ್ತಿರ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಎರಡು ವರ್ಷದ ಹೆಣ್ಣು ಚಿರತೆ ಮಂಗಳವಾರ ರಾತ್ರಿ ಸೆರೆ ಸಿಕ್ಕಿದೆ.

ಗುಲಗಂಜನಹಳ್ಳಿ, ಹಾಲುಬಾವಿಪಾಳ್ಯ ಪ್ರದೇಶದಲ್ಲಿ ಚಿರತೆಯ ಓಡಾಟವನ್ನು ಗಮನಿಸಿದ ಸ್ಥಳೀಯರು ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಇದಕ್ಕಾಗಿ ಮಂಗಳವಾರ ಸಂಜೆ ಬೋನು ಇರಿಸಲಾಗಿತ್ತು. ನಾಯಿಯನ್ನು ತಿನ್ನಲು ಬಂದಾಗ ಚಿರತೆ ಸೆರೆ ಸಿಕ್ಕಿದೆ.

ಕಗ್ಗಲೀಪುರ  ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗಳು ಚಿರತೆಗೆ ಚಿಕಿತ್ಸೆ ನೀಡಿದ ಬಳಿಕ ಕಾಡಿಗೆ ಬಿಡಲಾಯಿತು. ಐದು ವರ್ಷಗಳಲ್ಲಿ ಸುಮಾರು 10 ಚಿರತೆಗಳನ್ನು ಈ ಭಾಗದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಸ್ಥಳೀಯರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.