ಮಲ್ಟಿಪ್ಲೆಕ್ಸ್‌ಗಳಲ್ಲಿ ಹೊರಗಿನಿಂದ ತರುವ ಆಹಾರ, ನೀರಿನ ಬಾಟಲ್ ನಿಷೇಧಿಸುವಂತಿಲ್ಲ: ಬಾಂಬೆ ಹೈಕೋರ್ಟ್

ಮಂಗಳವಾರ, ಮಾರ್ಚ್ 26, 2019
29 °C

ಮಲ್ಟಿಪ್ಲೆಕ್ಸ್‌ಗಳಲ್ಲಿ ಹೊರಗಿನಿಂದ ತರುವ ಆಹಾರ, ನೀರಿನ ಬಾಟಲ್ ನಿಷೇಧಿಸುವಂತಿಲ್ಲ: ಬಾಂಬೆ ಹೈಕೋರ್ಟ್

Published:
Updated:
ಮಲ್ಟಿಪ್ಲೆಕ್ಸ್‌ಗಳಲ್ಲಿ ಹೊರಗಿನಿಂದ ತರುವ ಆಹಾರ, ನೀರಿನ ಬಾಟಲ್ ನಿಷೇಧಿಸುವಂತಿಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ಮಲ್ಟಿಪ್ಲೆಕ್ಸ್‌ಗಳು ಮತ್ತು ಚಿತ್ರ ಮಂದಿರಗಳಲ್ಲಿ ಹೊರಗಿನಿಂದ ತರುವ ಆಹಾರ ಮತ್ತು ನೀರಿನ ಬಾಟಲಿಗಳನ್ನು ನಿಷೇಧಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಆದೇಶ ನೀಡಿದೆ.

‘ಒಂದೋ ಚಿತ್ರ ಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳ ಒಳಗೆ ಆಹಾರ ತರುವುದನ್ನು ಅಥವಾ ವಿತರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಅಲ್ಲದಿದ್ದಲ್ಲಿ ತಾವು ಹೊರಗಿನಿಂದ ತರುವ ಆಹಾರ ಮತ್ತು ನೀರಿನ ಬಾಟಲಿಯನ್ನು ಒಯ್ಯಲು ಪ್ರೇಕ್ಷಕರಿಗೆ ಅವಕಾಶ ಕೊಡಬೇಕು’ ಎಂದು ನ್ಯಾಯಾಧೀಶರಾದ ಶಂತನು ಕೇಮ್ಕರ್ ಮತ್ತು ಮಕರಂದ್ ಕಾರ್ಣಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

‘ದುಬಾರಿ ಬೆಲೆಯ ಆಹಾರ ಕೊಂಡುಕೊಳ್ಳುವಂತೆ ಪ್ರೇಕ್ಷಕರ ಮೇಲೆ ಒತ್ತಡ ಹೇರುವಂತಿಲ್ಲ’ ಎಂದೂ ಪೀಠ ಹೇಳಿದೆ.

ಪೊಟ್ಟಣಗಳಲ್ಲಿರುವ ಆಹಾರ ಮತ್ತು ನೀರಿನ ಬಾಟಲಿಗಳನ್ನು ಕೊಂಡೊಯ್ಯುವುದನ್ನು ಚಿತ್ರಮಂದಿರಗಳಲ್ಲಿ, ಅದರಲ್ಲೂ ವಿಶೇಷವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ನಿಷೇಧಿಸಿರುವುದರ ವಿರುದ್ಧ ಮುಂಬೈ ನಿವಾಸಿ ಜಿತೇಂದ್ರ ಬಕ್ಷಿ ಎಂಬುವವರು ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು.

‘ಚಿತ್ರ ಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಆಹಾರವಸ್ತುಗಳನ್ನು ಮಾರಾಟ ಮಾಡಲು ಕಾನೂನಾತ್ಮಕ ನಿರ್ಬಂಧ ಇಲ್ಲದಿರುವಾಗ ತಾವೇ ತರುವ ಆಹಾರ ವಸ್ತುಗಳು, ನೀರಿನ ಬಾಟಲಿಯನ್ನು ಒಳಗೆ ಕೊಂಡೊಯ್ಯಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿಲ್ಲ. ಆದರೆ, ಕೆಲವು ಚಿತ್ರ ಮಂದಿರಗಳಲ್ಲಿ, ಅದರಲ್ಲೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಫಾಸ್ಟ್‌ಫುಡ್‌ ಮಾರಾಟ ಮಾಡಲಾಗುತ್ತದೆಯಲ್ಲದೆ ಚಿತ್ರ ಮಂದಿರದ ಒಳಗೇ ಸೇವಿಸಲೂ ಅವಕಾಶ ನೀಡಲಾಗುತ್ತಿದೆ. ಇದಕ್ಕೆ ಮಹಾರಾಷ್ಟ್ರ ಸಿನಿಮಾಗಳ (ನಿಯಂತ್ರಣ) ಕಾಯ್ದೆ, 1966ರ 21ನೇ ಕಲಂನಲ್ಲಿ ನಿರ್ಬಂಧವಿದೆ’ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ವಕೀಲ ಆದಿತ್ಯ ಪ್ರತಾಪ್ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಪ್ರೇಕ್ಷಕರು ತರುವ ಆಹಾರ ವಸ್ತುಗಳನ್ನು ಒಳಗೆ ಕೊಂಡೊಯ್ಯಲು ನಿಷೇಧಿಸುವುದರಿಂದ ಅನಾರೋಗ್ಯಪೀಡಿತರ, ಹಿರಿಯ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅರ್ಜಿಯಲ್ಲಿ ಬಕ್ಷಿ ಪ್ರತಿಪಾದಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry