ಮನೋಜ್ ಪ್ರಿಕ್ವಾರ್ಟರ್‌ಗೆ

ಬುಧವಾರ, ಮಾರ್ಚ್ 20, 2019
31 °C

ಮನೋಜ್ ಪ್ರಿಕ್ವಾರ್ಟರ್‌ಗೆ

Published:
Updated:
ಮನೋಜ್ ಪ್ರಿಕ್ವಾರ್ಟರ್‌ಗೆ

ಗೋಲ್ಡ್ ಕೋಸ್ಟ್‌: ಭಾರತದ ಮನೋಜ್ ಕುಮಾರ್ ಪುರುಷರ ಬಾಕ್ಸಿಂಗ್‌ನ 69 ಕೆ.ಜಿ ವಿಭಾಗದ 16ರ ಘಟ್ಟ ಪ್ರವೇಶಿಸಿದರು. ಆಕ್ಸೆನ್‌ಫೋರ್ಡ್‌ ಸ್ಟುಡಿಯೊಸ್‌ನ ರಿಂಕ್‌ನಲ್ಲಿ ಗುರುವಾರ ನಡೆದ ಬೌಟ್‌ನಲ್ಲಿ ಅವರು ನೈಜೀರಿ ಯಾದ ಒಸಿಟಾ ಒಮೇ ಅವರನ್ನು 5–0ಯಿಂದ ಮಣಿಸಿದರು.

ಈ ವಿಭಾಗದಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿ ಕಣಕ್ಕೆ ಇಳಿದಿದ್ದ ಮನೋಜ್ ಕುಮಾರ್ ಯಾವ ಹಂತ ದಲ್ಲೂ ಎದುರಾಳಿ ಮೇಲುಗೈ ಸಾಧಿಸಲು ಅವಕಾಶ ಮಾಡಿಕೊಡಲಿಲ್ಲ. ಎಲ್ಲ ಸುತ್ತುಗಳಲ್ಲೂ ಪಾರಮ್ಯ ಮೆರೆದ ಅವರು ಸುಲಭವಾಗಿ ಮುಂದಿನ ಹಂತಕ್ಕೆ ಲಗ್ಗೆ ಇರಿಸಿದರು.

ಇದೇ ವಿಭಾಗದ ಮತ್ತೊಂದು ಬೌಟ್‌ನಲ್ಲಿ ಮಾರಿಷಸ್‌ನ ಮೆರ್ವಿನ್ ಕ್ಲೇರ್‌ ಘಾನಾದ ಅಬುಬಕಾರಿ ಕ್ವಾಟರಿ ಅವರನ್ನು 5–0ಯಿಂದ ಮಣಿಸಿದರು. ಗ್ರೆನೆಡಾದ ಜೊನಾಥನ್‌ ಫ್ರಾಂಕೋಯ್ಸ್‌ ಸೆಚೆಲಿಸ್‌ನ್‌ ಸಾಯ್ನ್‌ ಬೊನಿಫೇಸ್ ವಿರುದ್ಧ ಗೆದ್ದರು.

ಸ್ಕಾಟ್ಲೆಂಡ್‌ನ ಸ್ಟೀಫನ್‌ ನ್ಯೂಯಿನ್ಸ್‌ 4–1ರಿಂದ ಟೋಂಗಾದ ಜಾನ್ ಮಾಲೆನಿ ವಿರುದ್ಧ ಗೆದ್ದರೆ ಪಾಕಿಸ್ತಾನದ ಗುಲ್‌ ಜೈಬ್‌ 3–2ರಿಂದ ಗೆನ್ಸಿಯ ವಿಲಿಯಂ ಪೊಲೈನ್‌ ಎದುರು ಗೆದ್ದರು. ನ್ಯೂಜಿಲೆಂಡ್‌ನ ಲಾರಿ ಹಿಂಡ್ಲಿ 5–0ಯಿಂದ ಸಿಯೆರಾ ಲೋನಿ ವಿರುದ್ಧ ಗೆದ್ದರು. ಬಹಾಮಸ್‌ನ ಕಾರ್ಲ್‌ ಹೀಲ್ಡ್‌ ಅವರನ್ನು ಆಸ್ಟ್ರೇಲಿಯಾದ ಟೆರಿ ನಿಕೊಲಾಸ್‌ 5–0ಯಿಂದ ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry