ಶನಿವಾರ, ಆಗಸ್ಟ್ 15, 2020
21 °C
ಮುಂಡರಗಿಯಲ್ಲಿ ಬಾಬು ಜಗಜೀವನ ರಾಂ ಜಯಂತಿ ಕಾರ್ಯಕ್ರಮ

ಕಟ್ಟುನಿಟ್ಟಾಗಿ ನೀತಿಸಂಹಿತೆ ಪಾಲಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಟ್ಟುನಿಟ್ಟಾಗಿ ನೀತಿಸಂಹಿತೆ ಪಾಲಿಸಲು ಸಲಹೆ

ಮುಂಡರಗಿ: ‘ಚುನಾವಣೆ ಘೋಷಣೆ ಆಗಿರುವುದರಿಂದ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕಾಗಿದೆ. ಗ್ರಾಮೀಣ ಭಾಗಗಳಲ್ಲಿ ಹಬ್ಬ ಹರಿದಿನ, ನಾಟಕ ಹಾಗೂ ಜಯಂತಿಗಳ ಅಂಗವಾಗಿ ಕೆಲವರು ಭಿತ್ತಿಪತ್ರಗಳನ್ನು ಹಾಕುತ್ತಿದ್ದು, ಅಂತಹ ಸಂದರ್ಭದಲ್ಲಿ ರಾಜಕೀಯ ನಾಯಕರ ಭಾವಚಿತ್ರ ಬಳಸಬಾರದು’ ಎಂದು ತಹಶೀಲ್ದಾರ್ ಭ್ರಮರಾಂಬಾ ಗುಬ್ಬಿಶೆಟ್ಟಿ ತಿಳಿಸಿದರು.ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳು ಗುರುವಾರ ತಹಶೀಲ್ದಾರ್ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಬಾಬು ಜಗಜೀವನ ರಾಂ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಬ್ಬ ಹರಿದಿನಗಳು ಅಥವಾ ಖಾಸಗಿ ಸಮಾರಂಭಗಳಿಗಾಗಿ ಪೆಂಡಾಲ್ ಹಾಕುವುದಕ್ಕೆ ಪೊಲೀಸ್ ಇಲಾಖೆ ಹಾಗೂ ತಾಲ್ಲೂಕು ಆಡಳಿತದಿಂದ ಪರವಾನಗಿ ಪಡೆದುಕೊಳ್ಳಬೇಕು. ಧ್ವನಿವರ್ಧಕ ಬಳಕೆಯನ್ನು ನಿಗದಿತ ಸಮಯದೊಳಗೆ ಸ್ಥಗಿತಗೊಳಿಸಬೇಕು. ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಬಿ.ಎನ್.ರಾಟಿ ಮಾತನಾಡಿ, ‘ಬಾಬು ಜಗಜೀವನರಾಮ್ ಅವರು ದೇಶ ಕಂಡ ಒಬ್ಬ ಅಪ್ರತಿಮ ನಾಯಕರಾಗಿದ್ದರು. ಅವರ ದೂರದೃಷ್ಟಿ ದೇಶವನ್ನು ಇಂದಿಗೂ ಮುನ್ನಡೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ’ ಎಂದು ಹರ್ಷ ವ್ಯಕ್ತಪಡಿಸಿದರು.ಲಕ್ಷ್ಮಣ ತಗಡಿನಮನಿ, ರಾಮಚಂದ್ರ ಗಾರವಾಡ, ಲಕ್ಷ್ಮಣ ಮುಂಡವಾಡ, ಬಿ.ಎಫ್.ಈಟಿ, ನಾಗರಾಜ ಹೊಸಮನಿ, ಹನಿಮಂತ ಗುಡಗೇರಿ, ಬಿ.ಎಚ್‌.ಮಲಕಬಾವಿ, ಮಂಜು ದೊಡ್ಡಮನಿ, ರಾಮು ದೊಡ್ಡಮನಿ, ಎಚ್‌.ಎಚ್‌.ಹರಿಜನ, ದಂಡೆಪ್ಪ ಹರಿಜನ ಹಾಜರಿದ್ದರು. 

ಡಿಎಸ್‌ಎಸ್‌: ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಮುಂಡರಗಿಯ ಹಳೆ ಎಪಿಎಂಸಿ ನ್ಯಾಯಬೆಲೆ ಅಂಗಡಿಯಲ್ಲಿ ಬಾಬು ಜಗಜೀವನರಾಂ ಜಯಂತಿಯನ್ನು ಆಚರಿಸಿದರು.ಕಾರ್ಯಕ್ರಮದಲ್ಲಿ ನಾಗರಾಜ ಹೊಸಮನಿ, ರಾಮಚಂದ್ರ ಗಾರವಾಡ, ಲಕ್ಷ್ಮಣ ಮುಂಡವಾಡ, ಹನುಮಂತ ಗುಡಗೇರಿ, ಬಿ.ಎಚ್‌.ಮಲಕಬಾವಿ, ಮಂಜು ದೊಡ್ಡಮನಿ, ರಾಮು ದೊಡ್ಡಮನಿ, ಎಚ್‌.ಎಚ್‌.ಹರಿಜನ, ದಂಡೆಪ್ಪ ಹರಿಜನ ಮತ್ತು ಇತರರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.