ಗುರುವಾರ , ಡಿಸೆಂಬರ್ 12, 2019
24 °C

ಮೋದಿ ಪ್ರಳಯಕ್ಕೆ ಬೆದರಿ ವಿರೋಧ ಪಕ್ಷಗಳೆಲ್ಲಾ ಪ್ರಾಣಿಗಳಂತೆ ಒಗ್ಗೂಡಿವೆ: ಅಮಿತ್ ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ಪ್ರಳಯಕ್ಕೆ ಬೆದರಿ ವಿರೋಧ ಪಕ್ಷಗಳೆಲ್ಲಾ ಪ್ರಾಣಿಗಳಂತೆ ಒಗ್ಗೂಡಿವೆ: ಅಮಿತ್ ಶಾ

ನವದೆಹಲಿ: ವಿರೋಧ ಪಕ್ಷಗಳೆಲ್ಲಾ ಒಂದಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿವೆ. ಪ್ರಳಯ ಬಂದಾಗ ಹಾವು, ಮುಂಗುಸಿ, ಬೆಕ್ಕು, ನಾಯಿ, ಚಿರತೆ ಮತ್ತು ಸಿಂಹಗಳೆಲ್ಲಾ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಮರ ಹತ್ತಿ ರಕ್ಷಣೆ ಪಡೆಯುತ್ತವೆ ಎಂದು ವಿಪಕ್ಷಗಳನ್ನು ಅಮಿತ್ ಶಾ ಗೇಲಿ ಮಾಡಿದ್ದಾರೆ.ಬಿಜೆಪಿಯ 38ನೇ ಸಂಸ್ಥಾಪನಾ ದಿನದ ಅಂಗವಾಗಿ ಮುಂಬೈನಲ್ಲಿ ನಡೆದ ರ‍್ಯಾಲಿಯಲ್ಲಿ ಅಮಿತ್ ಶಾ ವಿರೋಧ ಪಕ್ಷಗಳ ವಿರುದ್ದ ಟೀಕಾ ಪ್ರಹಾರ ಮಾಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷವನ್ನು ಪರಾಭವಗೊಳಿಸಲು ಬಿಜೆಪಿ ವಿರೋಧಿ ಪಕ್ಷಗಳೆಲ್ಲವೂ ಒಂದಾಗಿರುವ ವಿಷಯವನ್ನು ಉಲ್ಲೇಖಿಸಿ ಶಾ ವಾಗ್ದಾಳಿ ನಡೆಸಿದ್ದಾರೆ.

ವಿರೋಧ ಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಶಾ: ಕಾಂಗ್ರೆಸ್ ಆಕ್ಷೇಪ

ನಮ್ಮ ಸಂಸ್ಕೃತಿಯಲ್ಲಿ ಮನುಷ್ಯ ಮತ್ತು ಆತನ ಸ್ವಭಾವವನ್ನು ವಿವರಿಸಲು ಬಳಸುವ ಪದಗಳು ಬೇರೆಯೇ ಇರುತ್ತವೆ. ವಿರೋಧ ಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸುವ ಮೂಲಕ ಯುದ್ಧ ಶುರುವಾಗುವ ಮುನ್ನವೇ ಆ ನಾಯಕ ಯುದ್ದ ಸೋತಿರುವುದನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‍ನ ಸಂವಹನ ಉಸ್ತುವಾರಿ ಹೊಂದಿರುವ ರಣ್‍ದೀಪ್ ಸುರ್ಜೇವಾಲಾ ಹೇಳಿದ್ದಾರೆ.

 

ಅಮಿತ್ ಶಾ ಸ್ಪಷ್ಟನೆ
ಮೋದಿಯವರ ಅಲೆಗೆ ಬೆದರಿ ಬೇರೆ ಬೇರೆ ವಿಚಾರಧಾರೆಗಳ ಪಕ್ಷಗಳ ಎಲ್ಲವೂ ಒಂದಾಗಿವೆ ಎಂದು ತಾನು ಹೇಳಿರುವುದಾಗಿ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)