3

ಭಾನುವಾರ, 7–4–1968

Published:
Updated:

ಸಂಪುಟವನ್ನು ವಜಾ ಮಾಡುವ ಹಕ್ಕು ರಾಜ್ಯಪಾಲರಿಗಿಲ್ಲ

ನವದೆಹಲಿ, ಏ. 6– ಸಂಪುಟದ ವಿರುದ್ಧ ಅವಿಶ್ವಾಸ ನಿರ‍್ಣಯವನ್ನು ವಿಧಾನಸಭೆ ಅಂಗೀಕರಿಸದೆ ಸಂಪುಟವನ್ನು ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗಿಲ್ಲವೆಂದು ಲೋಕಸಭೆಯ ಅಧ್ಯಕ್ಷ ಶ್ರೀ ಎನ್. ಸಂಜೀವ ರೆಡ್ಡಿಯವರು ಇಂದು ಇಲ್ಲಿ ಹೇಳಿದರು.

ವಿಧಾನಸಭೆಯಲ್ಲಿ ಬಹುಸಂಖ್ಯೆ ಸದಸ್ಯರ  ಬೆಂಬಲವನ್ನು ಮುಖ್ಯಮಂತ್ರಿ ಪಡೆದಿದ್ದಾರೆಯೇ ಇಲ್ಲವೆ ಎನ್ನುವುದು ಯಾವ ಸಂದರ್ಭದಲ್ಲೂ ರಾಜ್ಯಪಾಲರ ನಿರ್ಧಾರಕ್ಕೆ ಬರುವಂತಿಲ್ಲವೆಂದು ಅವರು ಸ್ಪಷ್ಟಪಡಿಸಿದರು.

***

ಶ್ವೇತಭವನಕ್ಕೆ ಸೈನ್ಯದ ಪಹರೆ

ವಾಷಿಂಗ್ಟನ್, ಏ. 6– ಶ್ವೇತಭವನದ ಸುತ್ತಮುತ್ತ ಬಲವಾದ ಪಹರೆಯನ್ನು ಏರ್ಪಡಿಸಲಾಗಿದೆ. ಶ್ವೇತಭವನದ ರಕ್ಷಣೆಯನ್ನು ಫೆಡರಲ್ ಪಡೆಗಳಿಗೆ ವಹಿಸಿಕೊಡಲಾಗಿದೆ.

ರಾಷ್ಟ್ರಾದ್ಯಂತ ನೂರಾರು ಜನರನ್ನು ದಸ್ತಗಿರಿ ಮಾಡಲಾಗಿದೆ.

ಅವನು ನೀಗ್ರೋ ಆದರೆ...!

ಅವನು ನೀಗ್ರೋ

ಆದರೆ ಮಂಜಿಗಿಂತಲೂ ಶುದ್ಧ

ಅವನ ಹೃದಯ

ಕಪ್ಪು ಹೃದಯದ

ಬಿಳಿಯನಿಂದಲೇ ಅವನ ಕೊಲೆ

ಈ ವಾರ್ತೆ ತಿಳಿದಾಗ

ಅದೇ ಗುಂಡು ಬಡಿಯಿತೆನಗೆ,

ಆ ಗುಂಡಿಗೆ ಆತ ಬಲಿಯಾದ

ಆದರೆ ಅದರಿಂದ

ಪುನರ್ಜನ್ಮ  ಪಡೆದೆ ನಾನು...

ನೀಗ್ರೋ ಕುಲದವನಾಗಿ.

ಡಾ. ಮಾರ್ಟಿನ್ ಲೂಥರ್‌ಕಿಂಗ್ ನಿಧನ ವಾರ್ತೆ ಕೇಳಿ ರಷ್ಯದ ಕವಿ ಯೂಚಿನಿಯೋ ಎಪ್ತು ಶೆಂಕೊ ಬರೆದ ಕವಿತೆಯನ್ನು ಮೆಕ್ಸಿಕೊ ನಗರದ ‘ಎಲ್‌ಡಿಯ’ ಪತ್ರಿಕೆ ಶನಿವಾರ ತನ್ನ ಮೊದಲ ಪುಟದಲ್ಲಿ ಪ್ರಕಟಿಸಿದೆ.

***

ಅಮೆರಿಕದ ವರ್ಣೀಯ ಗಲಭೆಗಳಲ್ಲಿ 19 ಜನ ನೀಗ್ರೋಗಳ ಕೊಲೆ

ವಾಷಿಂಗ್ಟನ್, ಏ. 6– ಗುರುವಾರ ರಾತ್ರಿ ಡಾ. ಮಾರ್ಟಿನ್ ಲೂಥರ್‌ಕಿಂಗ್ ಕೊಲೆಯಾದ ಸುದ್ದಿ ತಿಳಿದ ಕೂಡಲೆ ಅಮೆರಿಕದ ಪ್ರಮುಖ ನಗರಗಳಲ್ಲಿ ಪ್ರಾರಂಭವಾದ ವರ್ಣೀಯ ಗಲಭೆ ಭೀಕರ ಸ್ವರೂಪ ತಾಳುತ್ತಿದೆ.

ಈ ಗಲಭೆಯಲ್ಲಿ 19 ಜನ ನೀಗ್ರೋಗಳು ಕೊಲ್ಲಲ್ಪಟ್ಟಿದ್ದಾರೆ.

ಅಮೆರಿಕನ್ ಸೈನ್ಯದ ಮುನ್ನೆಚ್ಚರಿಕೆ

ವಾಷಿಂಗ್ಟನ್, ಏ. 6– ಯಾವುದೇ ತೀವ್ರ ಗಲಭೆಗಳನ್ನಾದರೂ ಎದುರಿಸಲು ಅಮೆರಿಕನ್ ಸೈನ್ಯ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆಯೆಂದು ರಕ್ಷಣಾ ಶಾಖೆ ವಕ್ತಾರರೊಬ್ಬರು ತಿಳಿಸಿದ್ದಾರೆ.

ಆಸ್ತಿಪಾಸ್ತಿ ವಿವರ ಸಂಗ್ರಹಣೆ ನಿರ್ಧಾರ ಏನಾಯಿತು?

ಬೆಂಗಳೂರು, ಏ. 6– ಮಂತ್ರಿಗಳು, ಮಾಜಿ ಮಂತ್ರಿಗಳು, ಕಾಂಗ್ರೆಸ್‌ ಅಧಿಕಾರದಲ್ಲಿದ್ದವರ ಆಸ್ತಿಪಾಸ್ತಿ ಬಗ್ಗೆ ವಿವರ ಪಡೆಯುವ ಮುಖ್ಯಮಂತ್ರಿಗಳ ತೀರ್ಮಾನ ಏನಾಯಿತೆಂದು ವಿರೋಧಪಕ್ಷದ ನಾಯಕ ಶ್ರೀ ಎಸ್‌. ಶಿವಪ್ಪ ಅವರು ವಿಧಾನಸಭೆಯಲ್ಲಿ ಕೇಳಿದರು.

‘ಒಂದು ವಾರದಲ್ಲಿ ನೋಟಿಸ್‌ ಬರುತ್ತೆ ಅಂತ ಹೇಳಿದರು. ಈಗ 10–12 ದಿನ ಆಯಿತು. ನಿಜ ಪರಿಸ್ಥಿತಿ ಹೇಳಿ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry