ಶುಕ್ರವಾರ, ಆಗಸ್ಟ್ 14, 2020
21 °C

ಸೋಗಿಲು: ಅಡಿಕೆ ತೋಟಕ್ಕೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಗಿಲು: ಅಡಿಕೆ ತೋಟಕ್ಕೆ ಬೆಂಕಿ

ನ್ಯಾಮತಿ: ಸಮೀಪದ ಸೋಗಿಲು ಗ್ರಾಮದ ರೈತರೊಬ್ಬರ 5 ಎಕರೆ ಅಡಿಕೆ ತೋಟಕ್ಕೆ ಶುಕ್ರವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಫಸಲು ಸಂಪೂರ್ಣ ಸುಟ್ಟುಹೋಗಿದೆ.

ಗ್ರಾಮದ ಬಾಬು ಅವರ ಸರ್ವೆ ನಂ. 49:1ರ ತೋಟದಲ್ಲಿ ಬೆಳೆದಿದ್ದ ಅಡಿಕೆ ಫಸಲಿಗೆ ಮೆಕ್ಕೆಜೋಳದ ಗರಿಯಿಂದ ಬೆಂಕಿ ತಗುಲಿದೆ. ಹೊನ್ನಾಳಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು.‌ಬೆಂಕಿ ಆಕಸ್ಮಿಕದಿಂದ ಸುಮಾರು ₹ 25 ಲಕ್ಷ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದ ಸವಳಂಗ ಗ್ರಾಮ ಲೆಕ್ಕಾಧಿಕಾರಿ ಬಸವರಾಜಪ್ಪ ಮಾಹಿತಿ ನೀಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.