ಬೇಡಿಕೆ ಈಡೇರಿಸಲು ನಿವೃತ್ತ ಯೋಧರ ಆಗ್ರಹ

7

ಬೇಡಿಕೆ ಈಡೇರಿಸಲು ನಿವೃತ್ತ ಯೋಧರ ಆಗ್ರಹ

Published:
Updated:

 

ಮಡಿಕೇರಿ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಗರದಲ್ಲಿ ನಿವೃತ್ತ ಯೋಧರು ಶುಕ್ರವಾರ ಪ್ರತಿಭಟನೆ ನಡೆಸಿದರು. ನಿವೃತ್ತ ಯೋಧರ ಒಕ್ಕೂಟ, ಅರೆಸೇನಾಪಡೆ ಆಶ್ರಯದಲ್ಲಿ ಈ ಪ್ರತಿಭಟನೆ ನಡೆಯಿತು.

ಒಕ್ಕೂಟದ ಅಧ್ಯಕ್ಷ ಎಂ.ಜಿ. ಯತೀಶ್ ಮಾತನಾಡಿ, ಕೇಂದ್ರ ಸರ್ಕಾರದ ಗಮನ ಸೆಳೆಯಲು ನವದೆಹಲಿಯಲ್ಲೂ ಪ್ರತಿಭಟನೆ ನಡೆಯುತ್ತಿದೆ. ಅವರಿಗೆ ಬೆಂಬಲ ಸೂಚಿಸಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ನಿವೃತ್ತ ಯೋಧರ ಬೇಡಿಕೆ ಈಡೇರಿಸಲು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.

ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್), ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಿಬ್ಬಂದಿಗೆ ಒನ್‌ ರ್‍ಯಾಂಕ್‌ ಒನ್‌ ಪೆನ್ಶನ್‌ ಜಾರಿಗೊಳಿಸಬೇಕು. ಸೇನಾ ಪಡೆಯ ಯೋಧರಂತೆ ಅರೆ ಸೇನಾ ಪಡೆಗೂ ಸಮಾನ ಸೌಲಭ್ಯವನ್ನು ಸರ್ಕಾರ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಒಕ್ಕೂಟದ ಕಾರ್ಯದರ್ಶಿ ಎನ್.ಎಂ. ಭೀಮಯ್ಯ, ಉಪಾಧ್ಯಕ್ಷ ಪಿ.ಯಂ. ಚಂಗಪ್ಪ ಸಲಹೆಗಾರ ಎಸ್. ಆನಂದ, ಸದಸ್ಯರಾದ ಬಿ.ಎನ್. ರಾಜಶೇಖರ್, ರಮೇಶ್ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry