ಮಂಗಳವಾರ, ಆಗಸ್ಟ್ 11, 2020
21 °C

ವ್ಯಕ್ತಿಯೊಬ್ಬನಿಗೆ ನಟ ಜಗ್ಗೇಶ್‌ ಹಲ್ಲೆ: ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಕ್ತಿಯೊಬ್ಬನಿಗೆ ನಟ ಜಗ್ಗೇಶ್‌ ಹಲ್ಲೆ: ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ

ಬೆಂಗಳೂರು: ನಟ ಜಗ್ಗೇಶ್‌ ನಗರದ ಮಲ್ಲೇಶ್ವರಂನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಸಂಬಂಧ ಜಗ್ಗೇಶ್‌ ಸ್ಪಷ್ಟನೆ ನೀಡಿದ್ದಾರೆ.

ನಡೆದ ಘಟನೆ ಪರಾಮರ್ಶಿಸದೆಯೇ ನನ್ನ ಬಗ್ಗೆ ತಪ್ಪು ಸಂದೇಶ ಸಾರುವ ಹೇಳಿಕೆಯೊಂದಿಗೆ ವಿಡಿಯೊ ನೀಡಿರುವವರ ವಿರುದ್ಧ ಸೈಬರ್‌ ಕ್ರೈಂಗೆ ದೂರು ನೀಡಿ ಕಾನೂನಾತ್ಮಕವಾಗಿ ಉತ್ತರಿಸುತ್ತೇನೆ ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಮಾದೇಗೌಡ ನನ್ನ ಸಂಬಂಧಿ, ನೂರಾರು ಎಕರೆ ಪ್ರದೇಶದಲ್ಲಿ ತರಕಾರಿ ಬೆಳೆದು ವ್ಯಾಪಾರ ಮಾಡುತ್ತಾರೆ. ಅವರ ಮಗನ ಮಳಿಗೆ ಸಮೀಪ ಕಾರ್ಪೊರೇಟರ್‌ ಮಂಜಣ್ಣನ ಹೆಸರು ಹೇಳಿ ತೊಂದರೆ ಕೊಡುತ್ತಿದ್ದ. ನಾವು ಮಳಿಗೆ ಸಮೀಪ ಹೋದಾಗ ಕಾರ್ಪೊರೇಟರ್‌ ಹೆಸರಿನಲ್ಲಿ ದೌರ್ಜನ್ಯ ಮಾಡುತ್ತಿದ್ದ ವ್ಯಕ್ತಿ, ಕಾರ್ಪೊರೇಟರ್‌ ಅವರನ್ನು ನೋಡಿದ ತಕ್ಷಣ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಆತನನ್ನು ಹಿಡಿಯುವ ಸಮಯದಲ್ಲಿ ಎಳೆದಾಟ ಉಂಟಾಯಿತು. ಅಲ್ಲಿಗೆ ಪೊಲೀಸರು ಬಂದರು. ಆ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಹೋದೆವು....’ ಎಂದು ಘಟನೆಯನ್ನು ವಿವರಿಸಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

(ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ಜಗ್ಗೇಶ್‌ ಹಲ್ಲೆ ನಡೆಸಿದ್ದಾರೆ ಎನ್ನಲಾಗುವ ವಿಡಿಯೊ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.