ಮಂಗಳವಾರ, ಡಿಸೆಂಬರ್ 10, 2019
26 °C

ನಿಲ್ಲು ಮಳೆಯೇ...

Published:
Updated:
ನಿಲ್ಲು ಮಳೆಯೇ...

ಮಳೆ ಹನಿಯೇ

ಮಳೆ ಹನಿಯೇ

ನಿನ್ನ ನೋಡ ಬಂದರೆ!

ನೀರು ಯಾಕೆ?

ಹನಿಯು ಯಾಕೆ?

ಅಂತ ಅಮ್ಮ ಬೈತಾರೆ,

ಯಾಕೆ ಮಳೆಯೇ

ಹೇಳು ಹನಿಯೇ

ನಿನಗೂ ಅಮ್ಮಗೂ ಜಗಳವೇ?

ನಿನ್ನ ಹನಿಯು

ತಲೆಗೆ ಬರಲು

ಹಸಿಯ ಒರೆಸಿ ತಾಳುವಳು ಕೋಪವೇ!

 

ಶೀತ ಕೆಮ್ಮು

ಜ್ವರ ನೋವು

ಕೊಡುವೆಯಂತೆ ನನಗೆಯೇ!

ಮಳೆಯ ಕಡೆ

ಹೋಗಬೇಡ

ಮುದ್ದಿಸುತ್ತಾ ಹೇಳುತ್ತಾಳೆ ಹೀಗೆಯೇ!

ಕೋಪ ಬೇಡ

ಹೋಗ ಬೇಡ

ನಿಲ್ಲು ಬಂದೆ ಹೀಗೆಯೇ;

ಅಮ್ಮ ಅಡುಗೆ

ಮಾಡುತಿಹಳು

ಕದ್ದು ಬರುವೆ ನಿಲ್ಲೆ!

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು