ಸೋಮವಾರ, ಆಗಸ್ಟ್ 10, 2020
26 °C

ಹುಲಿ ಸೆರೆ ಕಾರ್ಯಾಚರಣೆ: ದೊರಕದ ಸುಳಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಲಿ ಸೆರೆ ಕಾರ್ಯಾಚರಣೆ: ದೊರಕದ ಸುಳಿವು

ಗೋಣಿಕೊಪ್ಪಲು (ಕೊಡಗು): ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಶನಿವಾರ ಕೊಟ್ಟಗೇರಿ ಭಾಗದ ಕಾಫಿ ತೋಟವನ್ನೆಲ್ಲ ಜಾಲಾಡಿದರೂ ಸುಳಿವು ಪತ್ತೆಯಾಗಲಿಲ್ಲ.

ನಾಗರಹೊಳೆ ಅರಣ್ಯದಂಚಿನ ಕೊಟ್ಟಗೇರಿ ಗ್ರಾಮದ ಕಾಫಿ ತೋಟದಲ್ಲಿ ಗುರುವಾರ ರಾತ್ರಿ ಹುಲಿ ಸುಳಿದಾಡುತ್ತಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಗೋಚರಿಸಿತ್ತು. ವಿರಾಜಪೇಟೆ ಉಪಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ್, ತಿತಿಮತಿ ಎಸಿಎಫ್ ಶ್ರೀಪತಿ, ನಾಗರಹೊಳೆ ಎಸಿಎಫ್ ಪೌಲ್ ಅಂಟೋನಿ, ಮತ್ತಿಗೋಡು ಆರ್‌ಎಫ್‌ಒ ಕಿರಣ್‌ಕುಮಾರ್, ಪೊನ್ನಂಪೇಟೆ ಆರ್‌ಎಫ್‌ಒ ಗಂಗಾಧರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್‌ಟಿಪಿಎಫ್ ತಂಡ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ 40 ಮಂದಿ ಪಾಲ್ಗೊಂಡಿದ್ದರು.

ಅರಣ್ಯ ಇಲಾಖೆಯ ಹುಲಿ ಸೆರೆ ಹಿಡಿಯುವ ವಿಷೇಷ ತಜ್ಞ ವೆಂಕಟೇಶ್ ಅವರು ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ಕೃಷ್ಣ, ದ್ರೋಣ, ಭೀಮ ಆನೆಗಳನ್ನು ಬಳಸಿಕೊಂಡು ಕಾಫಿ ತೋಟವನ್ನೆಲ್ಲ ಬೆಳಿಗ್ಗೆ 11ರ ವರೆಗೂ ತಡಕಾಡಿದರು. ಬೇಸಿಗೆಯಾದ್ದರಿಂದ ಹೆಜ್ಜೆ ಗುರುತು ಕೂಡ ಲಭಿಸುತ್ತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.