ಹಿಜಬ್ ಧರಿಸಿದ್ದ ಮಹಿಳೆಗೆ ಚೂರಿ ಇರಿತ

7

ಹಿಜಬ್ ಧರಿಸಿದ್ದ ಮಹಿಳೆಗೆ ಚೂರಿ ಇರಿತ

Published:
Updated:

ಹ್ಯೂಸ್ಟನ್: ಹಿಜಬ್ ಧರಿಸಿದ್ದ ನರ್ಸ್‌ ಮೇಲೆ ಇಬ್ಬರು ಯುವಕರು ಚೂರಿಯಿಂದ ಇರಿದಿದ್ದಾರೆ. ಅವರು ಮುಸ್ಲಿಂ ವಿರೋಧಿ ಚಟುವಟಿಕೆಯಿಂದ ಪ್ರೇರಿತಗೊಂಡು ಈ ದಾಳಿ ನಡೆಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ವಾಯವ್ಯ ಹ್ಯೂಸ್ಟನ್‌ನಲ್ಲಿ ಈ ಘಟನೆ ನಡೆದಿದೆ.

‘ಗುರುವಾರ ಬೆಳಿಗ್ಗೆ ಕೆಲಸ ಮುಗಿಸಿಕೊಂಡು ಮಹಿಳೆ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಕೆಂಪು ವಾಹನವೊಂದು ಇವರ ಕಾರಿಗೆ ತಾಗಿಸಿಕೊಂಡು ಹೋಗಿದೆ. ಇದರಿಂದ ಗಾಬರಿಯಾಗಿ, ಕಾರಿನಿಂದ ಕೆಳಗಿಳಿದು ವಾಹನಕ್ಕೆ ಏನಾಗಿದೆ ಎಂದು ಮಹಿಳೆ ನೋಡುತ್ತಿದ್ದರು. ಮತ್ತೆ ತಿರುಗಿ ಬಂದ ಇಬ್ಬರು ದುಷ್ಕರ್ಮಿಗಳು, ಚಾಕುವಿನಿಂದ ಮಹಿಳೆಯ ಮುಖ, ಕೈ ಮೇಲೆ ದಾಳಿ ಮಾಡಿದ್ದಾರೆ’ ಎಂದು ಅಮೆರಿಕನ್–ಇಸ್ಲಾಮಿಕ್ ರಿಲೇಷನ್ಸ್‌ ಕೌನ್ಸಿಲ್‌ನ ಹ್ಯೂಸ್ಟನ್‌ ಘಟಕ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry