ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಪು ತಂಪು ಕಲ್ಲಂಗಡಿ

Last Updated 8 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೇಸಿಗೆ ಬಂತೆಂದರೆ ಸಾಕು ದಾಹ ನೀಗಿಸಲು ಕಲ್ಲಂಗಡಿ ಹಣ್ಣು ನೆನಪಾಗುತ್ತದೆ. ಶೇ 92ರಷ್ಟು ನೀರಿನಂಶವನ್ನು ಒಳಗೊಂಡಿರುವ ಕಲ್ಲಂಗಡಿ ದಾಹ ನೀಗಿಸುವುದಷ್ಟೇ ಅಲ್ಲ ಆರೋಗ್ಯದ ಆಗರ ಕೂಡಾ.

ಅತಿ ಕಡಿಮೆ ಕೊಬ್ಬಿನ ಅಂಶ ಹೊಂದಿರುವುದರಿಂದ ಡಯಟ್ ಪ್ರಜ್ಞೆ ಇರುವವರಿಗೂ ಕಲ್ಲಂಗಡಿ ನೆಚ್ಚಿನ ಹಣ್ಣು. ಕಲ್ಲಂಗಡಿ ಚರ್ಮದ ಆರೋಗ್ಯಕ್ಕೂ ಹಿತಕಾರಿ. ಕಲ್ಲಂಗಡಿ ಹಣ್ಣಿನ ತಿರುಳಷ್ಟೇ ಅಲ್ಲ ಸಿಪ್ಪೆ, ಬೀಜಗಳೂ ಉಪಯುಕ್ತ.  ಕಲ್ಲಂಗಡಿಯಲ್ಲಿ ಏನೇನು ವಿಶೇಷ ಅಂಶಗಳಿವೆ ಅನ್ನುವ ಮಾಹಿತಿ ಇಲ್ಲಿದೆ.

* ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

* ದೇಹದಲ್ಲಿನ ಉರಿ ಕಡಿಮೆಗೊಳಿಸುತ್ತದೆ

* ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ

* ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ

* ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಮೂತ್ರ ಸಮಸ್ಯೆ ನೀಗುತ್ತದೆ

* ಕೊಬ್ಬನ್ನು ಕಡಿಮೆ ಮಾಡಿ ತೂಕ ಇಳಿಸುತ್ತದೆ

* ಕಲ್ಲಂಗಡಿಯಲ್ಲಿ ಶೇ 92ರಷ್ಟು ನೀರಿನಂಶ ಇದೆ. ಇದು ದೇಹಕ್ಕೆ ಶಕ್ತಿ ನೀಡುವುದರೊಂದಿಗೆ ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ.

*ಕಲ್ಲಂಗಡಿ ಸೇವನೆಯಿಂದ ಮುಖದ ಕಾಂತಿ ಹೆಚ್ಚುವುದಲ್ಲದೆ ಸುಕ್ಕು ನಿಯಂತ್ರಣಕ್ಕೆ ಬರುತ್ತದೆ.

* ಬೇಸಿಗೆಯಲ್ಲಿ ಚರ್ಮ ಒಣಗುವುದನ್ನು ತಡೆಯುತ್ತದೆ.

* ಇದರ ಜ್ಯೂಸ್ ಸೇವನೆಯಿಂದ ಚರ್ಮದ ಶುಷ್ಕತೆ ತಪ್ಪಿ ತಾಜಾ ಇರುವಂತೆ ನೋಡಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT