ಮಂಗಳವಾರ, ಜುಲೈ 14, 2020
24 °C

ಬಿಜೆಪಿ ದ್ವೇಷ ಬಿತ್ತಿ ಸಮಾಜ ವಿಭಜಿಸುವ ಕೆಲಸ ಮಾಡುತ್ತಿದೆ: ರಾಹುಲ್‌ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ದ್ವೇಷ ಬಿತ್ತಿ ಸಮಾಜ ವಿಭಜಿಸುವ ಕೆಲಸ ಮಾಡುತ್ತಿದೆ: ರಾಹುಲ್‌ ವಾಗ್ದಾಳಿ

ಬೆಂಗಳೂರು: ದ್ವೇಷ, ಅಸೂಯೆ ಬಿತ್ತುವ ಮತ್ತು ಸಮಾಜವನ್ನು ವಿಭಜಿಸುವ ಕೆಲಸವನ್ನು ಜಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಆಪಾದಿಸಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಕಾಂಗ್ರೆಸ್‌ ‘ಜನಾಶೀರ್ವಾದ’ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಅವರು ಚುನಾವಣಾ ಪ್ರಚಾರ ಭಾಷಣ ಮಾಡಿದರು.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಪಕ್ಷಗಳ ಮುಖಂಡರನ್ನು ಬೆಕ್ಕು, ನಾಯಿಗೆ ಹೋಲಿಕೆ ಮಾಡಿ ನಿಕೃಷ್ಟವಾಗಿ ಪ್ರಾಣಿ, ಪಕ್ಷಿಗಳಿಗೆ ಹೋಲಿಸಿದ್ದಾರೆ. ಆದರೆ, ಕಾಂಗ್ರೆಸ್ ಎಂದೂ ಇಂಥಹ ಕೆಲಸ ಮಾಡಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಜೈಲಿಗೆ ಹೋಗಿ ಬಂದವರನ್ನು ಪಕ್ಕ ಕೂರಿಸಿಕೊಂಡು ಭ್ರಷ್ಟಾಚಾರದ ಮಾತುಗಳನ್ನು ಆಡುತ್ತಾರೆ. ಸಾವಿರಾರು ಕೋಟಿ ವಂಚನೆ ಮಾಡಿ ವಿದೇಶಕ್ಕೆ ಹೋದವರ ಬಗ್ಗೆ ಮೋದಿ ಮಾತನಾಡುವುದಿಲ್ಲ ಎಂದು ಆಪಾದಿಸಿದರು.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಮಗ ಮೂರು ತಿಂಗಳಲ್ಲಿ ₹50 ಸಾವಿರವನ್ನು ಕೋಟ್ಯಾಂತ ರೂಪಾಯಿಗೆ ಪರಿವರ್ತಿಸುವ ಚಾಣಾಕ್ಷ್ಯತನ ಹೊಂದಿದ್ದಾರೆ ಎಂದು ಆಪಾದಿಸಿದರು.

ಬೆಂಗಳೂರಿಗೆ ವಿಶ್ವದ ಎಲ್ಲಾ ಕಡೆಯಿಂದ ಕೈಗಾರಿಕೆಗಳು ಬರುತ್ತಿವೆ ಎಂದರೆ ಅದು ಬೆಂಗಳೂರಿಗರ ಪರಿಶ್ರಮ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ತರಲು ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದ ಅವರು, ಬಸವಣ್ಣ, ಕೆಂಪೇಗೌಡರನ್ನು ನೆನೆದು, ನುಡಿದಂತೆ ನಡೆ ಎಂಬ ಬಸವಣ್ಣನವರ ಆಶಯದಂತೆ ನಡೆಯಬೇಕಿದೆ. ಬಸಣ್ಣನವರ ವಿಚಾರಧಾರೆ ಮುಂದಿಟ್ಟು ಹೋಗುತ್ತಿದ್ದೇವೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.