ಗೋಲ್ಡ್ ಕೋಸ್ಟ್: ಅಂಕಣದ ಮಧ್ಯ ನಿಂತಿದ್ದ ಇಂಗ್ಲೆಂಡ್ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡದ ಆಟಗಾರ್ತಿ ಜಾರ್ಜಿಯಾ ಜೋನ್ಸ್ ಕಂಗಳಲ್ಲಿ ಆಚ್ಚರಿ, ಸಂತಸಗಳು ಮೇಳೈಸಿದ ಹನಿಗಳು ಮಿನುಗುತ್ತಿದ್ದವು. ಅದಕ್ಕೆ ಕಾರಣ ಅವರ ಮುಂದೆ ಮಂಡಿಯೂರಿ ಕೂತಿದ್ದ ಜೆಮೆಲ್ ಆ್ಯಂಡರ್ಸನ್ ಮತ್ತು ಆವರ ಕೈಯಲ್ಲಿದ್ದ ಉಂಗುರ!

ಭಾನುವಾರ ಇಲ್ಲಿ ಪುರುಷರ ಬ್ಯಾಸ್ಕೆಟ್‌ಬಾಲ್ ಪಂದ್ಯದ ನಂತರ ಈ ಪ್ರೇಮ ನಿವೇದನೆಯ ಪ್ರಹಸನ ನಡೆಯಿತು.

ಪಂದ್ಯ ವೀಕ್ಷಿಸಲು ಬಂದಿದ್ದ ಜಾರ್ಜಿಯಾ ಅಂಕಣದ ಹೊರಗೆ ನಿಂತಿದ್ದರು. ಪಂದ್ಯ ಮುಗಿಯುತ್ತಿದ್ದಂತೆ ಆ್ಯಂಡರ್ಸನ್ ಮಂಡಿಯೂರಿ ಕುಳಿತು ಜಾರ್ಜಿಯಾ ಅವರಿಗೆ ನಿಶ್ಚಿತಾರ್ಥದ ಉಂಗುರ ಹಿಡಿದು ಪ್ರೇಮ ನಿವೇದನೆ ಮಾಡಿದರು. ಅವರ ಸುತ್ತ ಸಹ ಆಟಗಾರರು ಕುತೂಹಲದಿಂದ ನೋಡುತ್ತಿದ್ದರು. ಅಚ್ಚರಿಗೊಂಡ ಜಾರ್ಜಿಯಾ ಒಂದೆರಡು ಕ್ಷಣಗಳ ನಂತರ ಅಂಕಣದೊಳಗೆ ಓಡಿ ಹೋಗಿ ಆ್ಯಂಡರ್ಸನ್ ಅವರನ್ನು ಅಪ್ಪಿಕೊಂಡರು. ಸಹಆಟಗಾರರೆಲ್ಲರೂ ಕುಣಿದು ಕುಪ್ಪಳಿಸಿದರು. ಮಾಧ್ಯಮದವರ ಕ್ಯಾಮೆರಾಗಳು ಕಣ್ಣುಮಿಟುಕಿಸಿದವು.

‘ಆ್ಯಂಡರ್ಸನ್ ಅವರ ಈ ನಡೆಯನ್ನು ನಾನು ಊಹಿಸಿರಲಿಲ್ಲ. ಮೊದಲಿಗೆ ಅಚ್ಚರಿಯಾಯಿತು’ ಎಂದು 28 ವರ್ಷದ ಜಾರ್ಜಿಯಾ ಹೇಳಿದರು.

‘ಆಕೆ ನನ್ನ ಪ್ರಸ್ತಾವ ಒಪ್ಪಿಕೊಂಡಾಗ ಮಾತುಗಳೇ ಬರದೇ ಮೂಕನಾದೆ. ಕೆಲಕಾಲದಿಂದ ಜಾರ್ಜಿಯಾಳನ್ನು ಪ್ರೀತಿಸುತ್ತಿದ್ದೆ. ಇದೇ ರೀತಿ ನಿವೇದನೆ ಮಾಡಬೇಕೆಂದು ಯೋಚಿಸಿದ್ದೆ. ನನ್ನ ತಂಡದ ಸಹ ಆಟಗಾರರು ಬೆಂಬಲಿಸಿದರು. ಆಕೆ ಬಾಳಸಂಗಾತಿಯಾಗಲು ಒಪ್ಪಿರುವುದು ಸಮಾಧಾನ ತಂದಿದೆ’ ಎಂದು ಆ್ಯಂಡರ್ಸನ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಇದಕ್ಕೂ ಮುನ್ನ ನಡೆದಿದ್ದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು 81–54ರಿಂದ ಕ್ಯಾಮರೂನ್ ವಿರುದ್ಧ ಜಯಿಸುವಲ್ಲಿ ಆ್ಯಂಡರ್ಸನ್ ಪ್ರಮುಖ ಪಾತ್ರವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.