ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

7

ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

Published:
Updated:

ಬೆಂಗಳೂರು: ಹೆಸರಘಟ್ಟ ಸಮೀಪದ ಚಿಕ್ಕಬಾಣಾವರದ ಆರ್.ಆರ್.ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ‘ಕಲಾತರಂಗ’ ಕಾರ್ಯಕ್ರಮ ಸೋಮವಾರ ಮುಕ್ತಾಯಗೊಂಡಿತು.

ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ ವಿದ್ಯಾರ್ಥಿಗಳು ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಟ್ಟು ನೃತ್ಯ ಪ್ರದರ್ಶಿಸಿದರು. ಫ್ಯಾಷನ್‌ ಶೋ ಗಮನ ಸೆಳೆಯಿತು.

‘ಇಲ್ಲಿನ ವೀರಗಾಸೆ ಕಲೆ ನೋಡಿ ಅಚ್ಚರಿ ಉಂಟಾಯಿತು. ಕಲಾವಿದರು ಪ್ರಸ್ತುತಪಡಿಸಿದ ರೀತಿ ಅದ್ಭುತವಾಗಿತ್ತು. ಅದನ್ನು ಕಲಿಯಬೇಕು ಎನಿಸಿತು’ ಎಂದು ಅಸ್ಸಾಂನ ಮೇಘಾ ದತ್‌ ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಕಿರಣ್ ರೆಡ್ಡಿ, ‘ದೇಶದಲ್ಲಿ ಅನೇಕ ಕಲೆಗಳಿವೆ. ಅವುಗಳ ಕೊಡುಕೊಳ್ಳುವಿಕೆ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು’ ಎಂದರು.

ನಟ ಪ್ರಜ್ವಲ್ ಮತ್ತು ನಟಿ ರಾಗಿಣಿ ದ್ವಿವೇದಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry