ಸೋಮವಾರ, ಆಗಸ್ಟ್ 10, 2020
26 °C

ರೈತರ ಸಾಲಮನ್ನಾ ಮಾಡುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ಸಾಲಮನ್ನಾ ಮಾಡುವೆ

ನಾನು ಸಿ.ಎಂ ಆದರೆ ಜನಸಂಖ್ಯ ನಿಯಂತ್ರಣ, ಬಡವ–ಸಿರಿವಂತರ ನಡುವೆ ಸಮಾನತೆ ತರುವುದಕ್ಕೆ ಒತ್ತು ಕೊಡುತ್ತೇನೆ. ಯುವಜನರು ಸೇನೆಗೆ ಸೇರುವ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ಮಾಡುತ್ತೇನೆ. ಸರ್ಕಾರಿ ಶಾಲೆಗಳ ಬಗ್ಗೆ ಹೆಚ್ಚು ಗಮನ ಹರಿಸುವೆ. ಹಳ್ಳಿಯಲ್ಲಿ ಎಲ್ಲರ ಮನೆಗಳಿಗೂ ವಿದ್ಯುತ್‌ ಸೌಲಭ್ಯ ನೀಡುವೆ. ಪ್ರತಿ ಮನೆಗೂ ಶೌಚಾಲಯ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ, ಮಳೆನೀರು ಇಂಗಿಸುವುದರ ಜತೆಗೆ ರೈತರ ಸಾಲಮನ್ನಾ ಮಾಡುವೆ.

ಸರ್ಕಾರಿ ಶಾಲೆಗಳಿಗೆ ಎಲ್ಲಾ ರೀತಿಯ ಮೂಲಸೌಕರ್ಯ ಒದಗಿಸುವೆ. ಹಳ್ಳಿಹಳ್ಳಿಗೂ ಟಾರ್ ರಸ್ತೆ, ಎಟಿಎಂ ವ್ಯವಸ್ಥೆ ಕಲ್ಪಿಸುವೆ. ರೈತರಿಗೆ ಬಡ್ಡಿರಹಿತ ಸಾಲ ನೀಡುವೆ. ಕಡಿಮೆ ದರದಲ್ಲಿ ಒಳ್ಳೆಯ ಬಿತ್ತನೆಬೀಜ ದೊರೆಯುವಂತೆ ಮಾಡುವೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 58ಕ್ಕೆ ಇಳಿಸುವುದರ ಮೂಲಕ ಯುವಕರಿಗೆ ಸರ್ಕಾರಿ ನೌಕರಿಯಲ್ಲಿ ಅವಕಾಶ ಸಿಗುವಂತೆ ಮಾಡುವೆ. ಸರ್ಕಾರಿ ಕಚೇರಿಯಲ್ಲಿ ಲಂಚ ನಿರ್ಮೂಲನೆ ಮಾಡುವೆ.

ಪ್ರತಿ ಯುವಕನೂ ದುಡಿದು ತಿನ್ನುವಂತೆ ಮಾಡುವೆ. ಯಾರಿಗೂ ಉಚಿತವಾಗಿ ಆಹಾರ ಸಾಮಗ್ರಿ ಕೊಡದೆ, ಯುವಕರನ್ನು, ಬಡವರನ್ನು ಸೋಮಾರಿಗಳನ್ನಾಗಿ ಮಾಡುವುದಿಲ್ಲ. ಕ್ರೀಡೆಗೆ ಪ್ರೋತ್ಸಾಹ, ಓದುವವರಿಗೆ ಸಹಾಯಧನ ಒದಗಿಸುವೆ. ಪ್ರತಿಯೊಬ್ಬರೂ ಚಟುವಟಿಕೆಯ ಜೀವನ ನಡೆಸುವಂತೆ ಮಾಡುವೆ. ಜನಪ್ರತಿನಿಧಿಗಳು ಕ್ಷೇತ್ರದಲ್ಲೇ ಇರುವಂತೆ ಕಡ್ಡಾಯ ಮಾಡುವೆ. ಟಿಎ,ಡಿಎ ಎಲ್ಲಾ ಬಂದ್ ಮಾಡಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವೆ.

– ಟಿ.ಎಂ.ಮಾನಪ್ಪ, ಗೋಪಾಳ, ಶಿವಮೊಗ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.