ಶುಕ್ರವಾರ, ಡಿಸೆಂಬರ್ 13, 2019
20 °C
ಸಿನಿ ಹನಿ

ಮುಂದಿನ ತಿಂಗಳು ‘ಗೌಡ್ರು ಸೈಕಲ್’ ಸವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂದಿನ ತಿಂಗಳು ‘ಗೌಡ್ರು ಸೈಕಲ್’ ಸವಾರಿ

ಊರಿನ ಗೌಡರೊಬ್ಬರ ಸೈಕಲ್‌ ಪ್ರೀತಿ ಕುರಿತ ಸಿನಿಮಾ ‘ಗೌಡ್ರು ಸೈಕಲ್’. ಈ ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿವೆ. ಸಿನಿಮಾದ ಹಾಡುಗಳ ಬಿಡುಗಡೆ ಇದೇ ತಿಂಗಳಲ್ಲಿ ನಡೆಯಲಿದ್ದು, ಇದೇ ಮೇ ತಿಂಗಳಲ್ಲಿ ಚಿತ್ರ ತೆರೆ ಕಾಣಬೇಕು ಎಂಬ ಉದ್ದೇಶ ಚಿತ್ರತಂಡದ್ದು.

ಊರಿನ ಗೌಡರು ಮತ್ತು ಸೈಕಲ್ ನಡುವಿನ ಸಂಬಂಧವನ್ನು ಹಾಸ್ಯಮಯವಾಗಿ ಹೇಳುವುದು ಈ ಸಿನಿಮಾದ ಹೂರಣ. ‘ಹಳೆಯದಾಯಿತು ಎಂಬ ಕಾರಣಕ್ಕೆ ವಸ್ತುಗಳನ್ನು ಮತ್ತು ವಯಸ್ಸಾಯಿತು ಎಂಬ ಕಾರಣಕ್ಕೆ ಮನುಷ್ಯರನ್ನು ನಿರ್ಲಕ್ಷಿಸಬಾರದು’ ಎಂಬ ಸಂದೇಶವನ್ನೂ ಈ ಚಿತ್ರ ಹೊಂದಿದೆಯಂತೆ. ಮಂಡ್ಯ, ಚಿಕ್ಕ ಅರಸೀಕೆರೆ, ಮೆಣಸಿನಕೆರೆ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

‘ರಾಮಾ ರಾಮಾ ರೇ’ ಚಿತ್ರದಲ್ಲಿ ನಟಿಸಿದ್ದ ಬಿಂಬಶ್ರೀ ಈ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ನಟ ಶಶಿಕಾಂತ್ ಇದರ ನಾಯಕ. ಗೌಡರ ಪ್ರೀತಿಯ ಸೈಕಲ್ ಈ ಚಿತ್ರದ ಪ್ರಮುಖ ಪಾತ್ರಧಾರಿ ಎಂಬುದು ಸಿನಿತಂಡದ ಮಾತು. ಕೃಷ್ಣಮೂರ್ತಿ ಕವತ್ತಾರ್ ಸೇರಿದಂತೆ ಹಲವು ಹಿರಿಯ ನಟರು ಸಿನಿಮಾದಲ್ಲಿ ಇದ್ದಾರೆ. ಸವಿತಾ ರಾಜೇಶ್ ಚೌಟ ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ, ಪ್ರಶಾಂತ ಕೆ. ಯಳ್ಳಂಪಳ್ಳಿ ಅವರು ‘ಆ್ಯಕ್ಷನ್–ಕಟ್’ ಹೇಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)