ಔಡಿ ಆರ್‌ಎಸ್‌5 ಕಾರ್‌ ಮಾರುಕಟ್ಟೆಗೆ

ಶನಿವಾರ, ಮಾರ್ಚ್ 23, 2019
34 °C

ಔಡಿ ಆರ್‌ಎಸ್‌5 ಕಾರ್‌ ಮಾರುಕಟ್ಟೆಗೆ

Published:
Updated:
ಔಡಿ ಆರ್‌ಎಸ್‌5 ಕಾರ್‌ ಮಾರುಕಟ್ಟೆಗೆ

ಬೆಂಗಳೂರು: ಜರ್ಮನಿಯ ವಿಲಾಸಿ ಕಾರ್‌ ತಯಾರಿಕಾ ಸಂಸ್ಥೆ ಔಡಿ, ತನ್ನ ಎರಡನೆ ತಲೆಮಾರಿನ ಔಡಿ ಆರ್‌ಎಸ್‌5 ಕಾರನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ.

2.9 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿರುವ ಈ ಕಾರ್‌, ಪ್ರತಿ ಗಂಟೆಗೆ ಗರಿಷ್ಠ 250 ಕಿ. ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಕೇವಲ 3.9 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಶೂನ್ಯದಿಂದ 100 ಕಿ. ಮೀ ವೇಗ ಪಡೆದುಕೊಳ್ಳಲಿದೆ.

‘ಸೆಡಾನ್‌ ಕಾರ್‌ನ ಆರಾಮ ಮತ್ತು ಸ್ಪೋರ್ಟ್‌ ಕಾರ್‌ನ ಕಾರ್ಯಕ್ಷಮತೆ ಇದರ ವೈಶಿಷ್ಟಗಳಾಗಿವೆ’ ಎಂದು ಸಂಸ್ಥೆಯ ಮುಖ್ಯಸ್ಥ ರಾಹಿಲ್‌ ಅನ್ಸಾರಿ ಹೇಳಿದ್ದಾರೆ. ಇದರ ಎಕ್ಸ್‌ಷೋರೂಂ ಬೆಲೆ ₹ 1.1 ಕೋಟಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry