‘ಕೇಂದ್ರ ಸ್ಥಾನ ಬಿಡದಿರಿ’

7

‘ಕೇಂದ್ರ ಸ್ಥಾನ ಬಿಡದಿರಿ’

Published:
Updated:

ದಾವಣಗೆರೆ: ಚುನಾವಣೆ ಪ್ರಯುಕ್ತ ಜಿಲ್ಲೆಯ ಎಲ್ಲ ಸರ್ಕಾರಿ/ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗೂ ಕಚೇರಿ ಸಿಬ್ಬಂದಿ ಆಯಾ ತಾಲ್ಲೂಕಿನ ಕರ್ತವ್ಯನಿರತ ಕೇಂದ್ರ ಸ್ಥಾನಗಳನ್ನು ಬಿಡದಂತೆ ಡಿಡಿಪಿಐಕೆ. ಕೋದಂಡರಾಮ ಸೂಚಿಸಿದ್ದಾರೆ.

ಚುನಾವಣಾ ಅಧಿಕಾರಿಗಳಿಂದ ಚುನಾವಣಾ ಕಾರ್ಯಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿ ಆದೇಶಗಳನ್ನು ರವಾನಿಸುತ್ತಿದ್ದು, ಸಂಬಂಧಿಸಿದನೌಕರರು ಯಾವುದೇ ಸಬೂಬು ಹೇಳದೇ ಆದೇಶಗಳನ್ನು ಸ್ವೀಕರಿಸಿ,ನಿಗದಿತ ಕರ್ತವ್ಯ ನಿರ್ವಹಿಸಬೇಕು.

ಯಾರೂ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳಬಾರದು. ಚುನಾವ ಣಾಧಿಕಾರಿಗಳ ಕಚೇರಿ ಅಥವಾ ಬಿಇಒ ಕಚೇರಿಯಿಂದ ಕರೆ ಬಂದಲ್ಲಿ ಸ್ವೀಕರಿಸಿ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry