ಹಣ ಹಂಚಿಕೆ ಆರೋಪ; ಪುರಸಭೆ ಮಾಜಿ ಸದಸ್ಯ ವಶಕ್ಕೆ

7

ಹಣ ಹಂಚಿಕೆ ಆರೋಪ; ಪುರಸಭೆ ಮಾಜಿ ಸದಸ್ಯ ವಶಕ್ಕೆ

Published:
Updated:

ಕೆ.ಆರ್.ನಗರ: ಇಲ್ಲಿನ ಸಿ.ಎಂ ರಸ್ತೆಯ 8ನೇ ವಾರ್ಡ್ ಮನೆಯೊಂದರಲ್ಲಿ ಮಹಿಳೆಯರಿಗೆ ಹಣ ಹಂಚಿದ ಆರೋಪದ ಮೇರೆಗೆ ಪುರಸಭೆ ನಾಮನಿರ್ದೇಶಿತ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ವಿನಯ್ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗುವುದು ಎಂದು ಪ್ಲೈಯಿಂಗ್ ಸ್ಕಾಡ್ ಅಧಿಕಾರಿ ಶ್ರೀನಿವಾಸ್ ಹೇಳಿದರು.

ಮಹಿಳೆಯರಿಗೆ ಹಣ ಹಂಚಲಾಗುತ್ತದೆ ಎಂದು ಬುಧವಾರ ಸಂಜೆ ಮಾಹಿತಿ ಸಿಕ್ಕಿತು. ಸ್ಥಳಕ್ಕೆ ಹೋಗುವಷ್ಟರಲ್ಲಿ ಅಲ್ಲಿ ಯಾರೂ ಹಣ ಹಂಚುತ್ತಿರಲಿಲ್ಲ. ಆದರೆ, ಹಣ ಹಂಚುತ್ತಿರುವ ಬಗ್ಗೆ ಇಂದ್ರಜಿತ್ ಗೌಡ ಎಂಬಾತ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ ವಿಡಿಯೊ ಕ್ಲಿಪ್ಪಿಂಗ್ ತೋರಿಸಿದ. ಅದಲ್ಲಿರುವ ವ್ಯಕ್ತಿ ವಿನಯ್ ಎಂದು ಗುರುತಿಸಿ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತರಲಾಗಿದೆ. ಚುನಾವಣಾ ಅಧಿಕಾರಿಗಳ ಸೂಚನೆಯಂತೆ ವಿನಯ್ ವಿರುದ್ಧ ದೂರು ದಾಖಲಿಸಲಾಗುತ್ತದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಹಣ ಹಂಚುತ್ತಿರುವ ವಿಡಿಯೊ ವೈರಲ್ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry