ಎಚ್ಚರಿಕೆಯಿಂದ ಮತ ಚಲಾಯಿಸಿ

7
ವಲಯ ಅಧಿಕಾರಿ ಟಿ.ಎಲ್. ಉಮೇಶ್ ಕಿವಿಮಾತು

ಎಚ್ಚರಿಕೆಯಿಂದ ಮತ ಚಲಾಯಿಸಿ

Published:
Updated:

ಶೃಂಗೇರಿ: ಕೆಲವು ಮತದಾರರಿಗೆ ಮತವನ್ನು ಹೇಗೆ ಚಲಾಯಿಸಬೇಕು ಎಂಬುದರ ಬಗ್ಗೆ ಗೊಂದಲವಿದೆ. ಹಾಗಾಗಿ ಚುನಾವಣಾ ಆಯೋಗವು ಎಲ್ಲಾ ಮತ ಕೇಂದ್ರಗಳಲ್ಲಿ ವಿ.ವಿ ಪ್ಯಾಟ್ ಯಂತ್ರದ ಮೂಲಕ ಆಯಾಯ ಬೂತ್ ಮಟ್ಟದ ಮತದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಾಲ್ಲೂಕು ಚುನಾವಣಾ ಆಯೋಗದ ವಲಯ ಅಧಿ ಕಾರಿ ಟಿ.ಎಲ್.ಉಮೇಶ್ ತಿಳಿಸಿ ದರು.

ಶೃಂಗೇರಿ ತಾಲ್ಲೂಕಿನ ಮಸಿಗೆ ಗ್ರಾಮದ ಪಡುಬೈಲು ಬೂತಿನ ಮತಗಟ್ಟೆಯಲ್ಲಿ ಬುಧವಾರ ವಿ.ವಿ.ಪ್ಯಾಟ್ ಯಂತ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾವು ಹಾಕಿದ ಮತ ಸರಿಯಾಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ಈ ಯಂತ್ರದಿಂದ ತಿಳಿಯಬಹುದು. ಮತದಾನ ಮಾಡುವಾಗ ಅತಿ ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದರು.

ಮತಯಂತ್ರದ ತರಬೇತುದಾರ ಎಸ್.ಮಂದಾರ ಹಾಗೂ ನಾಗರಿಕರು ಭಾಗವಹಿಸಿದ್ದರು.ತಾಲ್ಲೂಕಿನ ಕಲ್ಕಟ್ಟೆ, ಮಸಿಗೆ, ಬೆಣ್ಣೆಗುಡ್ಡೆ, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಕಿಕ್ರೆ, ಮೌಳಿ, ಕುಂಚೇಬೈಲು, ಮೆಣಸೆ ಮುಂತಾದ ಕಡೆ ಯಂತ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry