ವರುಣಾದಲ್ಲಿ ವಿಜೇಯಂದ್ರ ಮತಯಾಚನೆ

7

ವರುಣಾದಲ್ಲಿ ವಿಜೇಯಂದ್ರ ಮತಯಾಚನೆ

Published:
Updated:

ವರುಣಾ: ಬಿಜೆಪಿ ಸಂಭಾವ್ಯ ಅಭ್ಯರ್ಥಿ ಬಿ.ವೈ.ವಿಜೇಯಂದ್ರ ಅವರು ಗುರುವಾರ ವರುಣಾ ಕ್ಷೇತ್ರದ ತೋರನಹಳ್ಳಿ ಹೊಮ್ಮಮಳೆ, ಕಾರಮೊಳೆ ತೊರನಹಳ್ಳಿ, ಹೊಮ್ಮೆ, ಚಿಕ್ಕಹೊಮ್ಮೆ  ಗ್ರಾಮಗಳಲ್ಲಿ ಮನೆ ಮನೆ ತೆರಳಿ  ಮತಯಾಚನೆ ಮಾಡಿದರು.

ತೊರನಹಳ್ಳಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಹೊಮ್ಮೆ ಗ್ರಾಮದಲ್ಲಿ ಮನೆಯೊಂದರ ಜಗಲಿ ಕಟ್ಟೆಯ ಮೇಲೆ ಕುಳಿತು ಗ್ರಾಮದ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಚಿಕ್ಕಿಹೊಮ್ಮ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ದಾಸನೂರು ಗ್ರಾಮದಲ್ಲಿ ಬಸವ ಬಳಗದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಇದಕ್ಕೂ ಮೊದಲು ಆಲನಹಳ್ಳಿಯಲ್ಲಿ ಕುದೇರು ಮಠದ ಶಾಂತ ಸ್ವಾಮೀಜಿಯನ್ನು ಭೇಟಿಯಾಗಿ ಆರ್ಶೀವಾದ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry