ಮನೆಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿದ್ದಾರೆ, ಬಿಜೆಪಿಗರಿಗೆ ಪ್ರವೇಶವಿಲ್ಲ!

ಮಂಗಳವಾರ, ಮಾರ್ಚ್ 19, 2019
26 °C

ಮನೆಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿದ್ದಾರೆ, ಬಿಜೆಪಿಗರಿಗೆ ಪ್ರವೇಶವಿಲ್ಲ!

Published:
Updated:
ಮನೆಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿದ್ದಾರೆ, ಬಿಜೆಪಿಗರಿಗೆ ಪ್ರವೇಶವಿಲ್ಲ!

ಬೆಂಗಳೂರು: ಬಾಲಕಿಯರ ಅತ್ಯಾಚಾರ ಪ್ರಕರಣಗಳ ಸಂಬಂಧ ದೇಶದಾದ್ಯಂತ ಚರ್ಚೆಯಾಗುತ್ತಿರುವ ಬೆನ್ನಲೇ ‘ಮನೆಯಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳಿರುವುದರಿಂದ ಬಿಜೆಪಿಗರೇ, ನಿಮಗೆ ಮನೆಯೊಳಗೆ ಪ್ರವೇಶವಿಲ್ಲ’ ಎಂಬ ಸಾಲುಗಳನ್ನು ಒಳಗೊಂಡ ಬಿತ್ತಿ ಪತ್ರಗಳನ್ನು ಮನೆಗಳ ಮುಂದೆ ಅಂಟಿಸಲಾಗಿದೆ.

ಉನ್ನಾವ್ ಮತ್ತು ಕಠುವಾದಲ್ಲಿ ಬಾಲಕಿಯರ ಮೇಲೆ ನಡೆದಿರುವ ಅತ್ಯಾಚಾರ, ಕೊಲೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಉನ್ನಾವ್‌ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕರೇ ಆರೋಪಿ ಸ್ಥಾನದಲ್ಲಿದ್ದು, ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ. ಕೇರಳದಲ್ಲಿ ಮನೆಗಳ ಮುಂದೆ ‘ಬಿಜೆಪಿಗರಿಗೆ ಪ್ರವೇಶವಿಲ್ಲ, ಇಲ್ಲಿ ಅಪ್ರಾಪ್ತೆಯರು ಇದ್ದಾರೆ. ವೋಟು ಕೇಳಲು ಬರುವವರು ಪ್ರಚಾರ ಪತ್ರಗಳನ್ನು ಗೇಟಿನ ಮುಂದೆಯೇ ಹಾಕಿ ಹೊರಡಿ’ ಎಂದು ಪತ್ರ ಅಂಟಿಸಲಾಗಿದೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಟ್ವಿಟರ್‌ನಲ್ಲಿ ಪ್ರಕಟಿಸಿರುವ ಫೋಟೋಗಳಲ್ಲಿ ಕಾಣುವ ಪತ್ರಗಳಲ್ಲಿ ಮಲಯಾಳಂ ಅಕ್ಷರಗಳಿವೆ. ಇದನ್ನು ಕೆಲವರು ತರ್ಜುಮೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ  ಮರು ಹಂಚಿಕೆ ಮಾಡಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry