ಹಾಕಿ ಲೀಗ್‌ ಫೈನಲ್‌ ಪಂದ್ಯ: ಎಎಸ್‌ಸಿಗೆ ಜಯ

7

ಹಾಕಿ ಲೀಗ್‌ ಫೈನಲ್‌ ಪಂದ್ಯ: ಎಎಸ್‌ಸಿಗೆ ಜಯ

Published:
Updated:

ಬೆಂಗಳೂರು: ಎಎಸ್‌ಸಿ ತಂಡವು ನಾಲ್ಕನೆ ಆವೃತ್ತಿಯ ಕರ್ನಾಟಕ ಲೀಗ್‌ನ ಫೈನಲ್‌ ಪಂದ್ಯದಲ್ಲಿ ಜಯ ಸಾಧಿಸಿದೆ.

ಎಎಸ್‌ಸಿ ತಂಡವು ಕೆನರಾ ಬ್ಯಾಂಕ್‌ ತಂಡದ ವಿರುದ್ಧ 3–2ರ ಅಂತರದಿಂದ ಜಯ ದಾಖಲಿಸಿ ಟ್ರೋಫಿ ಎತ್ತಿ ಹಿಡಿಯಿತು.

ಫೀಲ್ಡ್‌ ಮಾರ್ಷಲ್‌ ಕೆ. ಎಂ. ಕಾರಿಯಪ್ಪ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಯಿತು.

ಪಂದ್ಯ ಆರಂಭವಾದ ಮೊದಲ ನಿಮಿಷದಲ್ಲೇ ವಿಜಯೀ ತಂಡದ ಪರವಾಗಿ ಬಿ. ಭೇಂಗ್ರ ಅವರು ಗೋಲು ದಾಖಲಿಸಿದರು.

ಈ ಮೂಲಕ ವಿಶ್ವಾಸ ಹೆಚ್ಚಿಸಿಕೊಂಡ ಎಎಸ್‌ಸಿ ತಂಡದವರು ಬಿರುಸಿನ ಆಟಕ್ಕೆ ಮೋರೆ ಹೋದರು.

44ನೇ ನಿಮಿಷದಲ್ಲಿ ತಂಡದ ಆನಂದ ನಾಗ್‌ ಹಾಗೂ 67 ನಿಮಿಷದಲ್ಲಿ ಸರೀನ್‌ ಅವರು ಚೆಂಡನ್ನು ಗುರಿ ಮುಟ್ಟಿಸುವ ಮೂಲಕ ತಂಡವನ್ನು ಗೆಲುವಿನ ದಡ ತಲುಪಿಸಿದರು.

ಕೆನರಾ ತಂಡವು ಪ್ರತಿರೋಧ ಒಡ್ಡಿತಾದರೂ, ದ್ವಿತಿಯಾರ್ಧದಲ್ಲಿ ಎದುರಾಳಿ ಆಟಗಾರರ ರಕ್ಷಣಾ ಪಡೆ ದಾಟಲು ಹರಸಾಹಸಪಟ್ಟಿತು.

ಈ ತಂಡದ ಪರವಾಗಿ ಪ್ರಧಾನ ಸೋಮಣ್ಣ (32 ನಿಮಿಷ) ಹಾಗೂ ಮೊಸೆಸ್‌ (43 ನಿಮಿಷ) ತಲಾ ಒಂದು ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry