ವಿಶ್ವನಾಥ್‌ಗೆ ಪ್ರವೇಶ ನಿರಾಕರಣೆ

7

ವಿಶ್ವನಾಥ್‌ಗೆ ಪ್ರವೇಶ ನಿರಾಕರಣೆ

Published:
Updated:

ಮಂಡ್ಯ: ಮಳವಳ್ಳಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಡಾ.ಕೆ. ಅನ್ನದಾನಿ ಪರ ಪ್ರಚಾರ ನಡೆಸಲು ತೆರಳಿದ್ದ ಮುಖಂಡ ಎಚ್‌.ವಿಶ್ವನಾಥ್‌ ಅವರಿಗೆ ಶುಕ್ರವಾರ ಮಂಚನಹಳ್ಳಿ ಗ್ರಾಮಸ್ಥರು ಪ್ರವೇಶ ನಿರಾಕರಿಸಿದ್ದಾರೆ. ಗ್ರಾಮಸ್ಥರೊಂದಿಗೆ ನಡೆಸಿದ ವಾಗ್ವಾದದ ವಿಡಿಯೊ ವೈರಲ್‌ ಆಗಿದೆ.

ಕುರುಬ ಸಮಾಜದ ಜನರು ಹೆಚ್ಚಾಗಿ ಇರುವ ಗ್ರಾಮಗಳಲ್ಲಿ ವಿಶ್ವನಾಥ್‌ ಪ್ರಚಾರ ನಡೆಸುತ್ತಿದ್ದರು. ಮಂಚನಹಳ್ಳಿಗೆ ಬಂದೊಡನೆ ಗ್ರಾಮಸ್ಥರು ಅವರ ಕಾರು ತಡೆದು ಗ್ರಾಮದೊಳಗೆ ಕಾಲಿಡದಂತೆ ಆಗ್ರಹಿಸಿದರು. ಕಾರಿನಿಂದ ಕೆಳಗಿಳಿದು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ವಿಶ್ವನಾಥ್‌ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.

‘ಸಿದ್ದರಾಮಯ್ಯ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ನೀವು ನಮ್ಮ ಊರಿನಲ್ಲಿ ಪ್ರಚಾರ ಮಾಡಬೇಡಿ ’ ಎಂದಿದ್ದಾರೆ. ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry