ಶನಿವಾರ, ಆಗಸ್ಟ್ 15, 2020
21 °C

ಪ್ರಜಾವಾಣಿ ಕ್ವಿಜ್ 17

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ಕ್ವಿಜ್ 17

1. ಶಿವನ ಐದು ಮುಖಗಳಲ್ಲಿ ಇವುಗಳಲ್ಲಿ ಯಾವುದು ಸೇರಿಲ್ಲ?

ಅ) ವಾಮದೇವ ಆ) ಶಂಕರ

ಇ) ಈಶಾನ ಈ) ಅಘೋರ

2. ‘ಎಮ್ಮಾ’ ಎಂಬ ಇಂಗ್ಲಿಷ್ ಕಾದಂಬರಿಯ ಲೇಖಕಿ ಯಾರು?

ಅ) ವರ್ಜಿನಿಯಾ ಉಲ್ಫ್ ಆ) ಅಗಾಥ ಕ್ರಿಸ್ಟಿ

ಇ) ಜೇನ್ ಆಸ್ಟನ್ ಈ) ಕ್ಯಾಥರಿನಾ

3. ‘ನೆಫ್ರಾಲಜಿ’ಯು ದೇಹದ ಯಾವ ಅಂಗಕ್ಕೆ ಸಂಬಂಧಿಸಿದ ವೈದ್ಯಶಾಸ್ತ್ರವಾಗಿದೆ?

ಅ) ಮೂತ್ರಪಿಂಡ →ಆ) ಕಿವಿ

ಇ) ಮೂಗು →ಈ) ಜಠರ

4. ‘ಫೈಕಸ್ ರಿಲಿಜಿಯೋಸ’ಎನ್ನುವುದು ಯಾವ ಸಸ್ಯದ ಸಸ್ಯಶಾಸ್ತ್ರೀಯ ಹೆಸರು?

ಅ) ಅರಳಿ ಮರ →ಆ) ಆಲದ ಮರ

ಇ) ಅತ್ತಿ ಮರ →ಈ) ರಬ್ಬರ್ ಮರ

5. ಉತ್ತಂಗಿ ಚೆನ್ನಪ್ಪನವರು ಯಾರ ರಚನೆಗಳನ್ನು ಸಂಪಾದಿಸಿದರು?

ಅ) ಬಸವಣ್ಣ →ಆ) ಕನಕದಾಸ

ಇ) ಅಲ್ಲಮ ಪ್ರಭು →ಈ) ಸರ್ವಜ್ಞ

6. 1945ರಲ್ಲಿ ಹೊರಬಂದ ‘ಮೀರಾ’ ಚಲನಚಿತ್ರದ ನಾಯಕಿ ಯಾರು?

ಅ) ಕನ್ನಂಬಾಳ್ →ಆ) ಭಾನುಮತಿ

ಇ) ಎಂ.ಎಸ್. ಸುಬ್ಬಲಕ್ಷ್ಮಿ →ಈ) ಹರಿಣಿ

7. ಭಾರತ ಸಂವಿಧಾನದ ಎಷ್ಟನೇ ಶೆಡ್ಯೂಲ್‍ನಲ್ಲಿ ಅಧಿಕೃತ ಭಾಷೆಗಳ ಪಟ್ಟಿ ಇದೆ?

ಅ) ಆರು →→ಆ) ಎಂಟು

ಇ) ಮೂರು →→ಈ) ಎರಡು

8. ‘ಚೌ’ ಯಾವ ರಾಜ್ಯದ ಜಾನಪದ ನೃತ್ಯ?

ಅ) ಒಡಿಶಾ →→ಆ) ಬಿಹಾರ

ಇ) ಹಿಮಾಚಲಪ್ರದೇಶ →ಈ) ಗುಜರಾತ್

9. ಗಾಜನ್ನು ತಯಾರಿಸಲು ಬಳಸುವ ಪ್ರಮುಖ ಮೂಲವಸ್ತು ಯಾವುದು?

ಅ) ಪ್ಲಾಸ್ಟಿಕ್ →→ಆ) ಸುಣ್ಣ

ಇ) ಮರಳು →→ಈ) ಇದ್ದಿಲು

10. ‘ನವಕೋಟಿ ನಾರಾಯಣ’ರೆನಿಸಿದ್ದ ಮೈಸೂರಿನ ಒಡೆಯರ್ ಯಾರು?

ಅ) ಯದುರಾಯ →ಆ) ಕೃಷ್ಣರಾಯ

ಇ) ಚಾಮರಾಜ →ಈ) ಚಿಕ್ಕದೇವರಾಯ

ಹಿಂದಿನ ಸಂಚಿಕೆಯ ಸರಿ ಉತ್ತರಗಳು:

1. ಗೋಲ್ಡ್ ಕೋಸ್ಟ್

2. ಪ್ರಕಾಶ್ ಜಾವಡೇಕರ್

3. ಮೈಕಲ್ ಏಂಜಲೋ

4. ವಿಜಯ ನಾರಸಿಂಹ

5. ಹರೀಶ್ ಹಂದೆ 

6. ಸಿಲೋನ್

7. ಕಬ್ಬಿಣ

8. ಗುರುದತ್ತ್

9. ಕಂಪ್ಯೂಟರ್

10. ಪದ್ಮನಾಭ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.