ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯವಾಗಲಿ ಆಭರಣ

Last Updated 15 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅಕ್ಷಯ ತೃತೀಯ ಮತ್ತೆ ಬಂದಿದೆ. ಅಕ್ಷಯ ಎಂದರೆ ಕ್ಷಯವಿಲ್ಲದ್ದು, ಕಡಿಮೆಯಿಲ್ಲದ್ದು, ಕೊನೆಯಿಲ್ಲದ್ದು...  ಎಂಬ ಭಾವ ಎಲ್ಲರಲ್ಲಿ ಭಧ್ರವಾಗಿದೆ.

ಶುಭಾರಂಭ, ನಿರಂತರ ವೃದ್ಧಿಯ ಪ್ರತೀಕವಾಗಿರುವ ಈ ದಿನ ಮದುವೆ, ಉಪನಯನ, ದಾನ, ಪೂಜೆಗಳ ಜತೆಗೆ ಚಿನ್ನದ ಖರೀದಿಗೂ ಶುಭದಿನ ಎಂಬ ನಂಬಿಕೆ ಇದೆ.

ಈ ನಂಬಿಕೆಗೆ ಇಂಬುಗೊಡುವಂತೆ ಇತ್ತೀಚಿನ ವರ್ಷಗಳಲ್ಲಿ ಅಕ್ಷಯ ತೃತೀಯ ದಿನ ಚಿನ್ನಾಭರಣ ಖರೀದಿ ಭರಾಟೆಯೂ ಜೋರಾಗಿಯೇ ಇರುತ್ತದೆ. ಈ ಬಾರಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಲು ನೀವೂ ತಯಾರಾಗಿದ್ದೀರಾ? ಯಾವೆಲ್ಲ ಮಳಿಗೆಗಳಲ್ಲಿ ಏನೆಲ್ಲಾ ರಿಯಾಯ್ತಿ ಇದೆ ಗೊತ್ತಾ?

ಗಂಜಾಂ
ಗಂಜಾಂ ಸಂಸ್ಥೆಯು ವಿಠ್ಠಲ್‌ ಮಲ್ಯ ರಸ್ತೆಯಲ್ಲಿ ನೂತನ ಆಭರಣ ಮಳಿಗೆ ಆರಂಭಿಸಿದೆ. ಸುಂದರ ವಿನ್ಯಾಸದ ಕರಕುಶಲ ಆಭರಣಗಳು, ಸಾಂಪ್ರದಾಯಿಕ ಮತ್ತು ಸಮಕಾಲೀನ ಆಭರಣಗಳ ಸಂಗ್ರಹ ಇಲ್ಲಿದೆ. ಗುಣಮಟ್ಟದ ವಜ್ರ, ಬೆಳ್ಳಿಯ ಅಸಂಖ್ಯ ವಿನ್ಯಾಸಗಳ ಅಪಾರ ಸಂಗ್ರಹವಿದೆ. ಏ.18ರಂದು ನೂತನ ಮಳಿಗೆಯು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ.

ಜಿಆರ್‌ಟಿ ಜುವೆಲ್ಲರ್ಸ್‌
ಚಿನ್ನಾಭರಣಗಳ ಖರೀದಿ ಮೇಲೆ ಪ್ರತಿ ಗ್ರಾಂನ ಬೆಲೆಯಲ್ಲಿ ₹ 50 ಕಡಿತ, ವಜ್ರಾಭರಣಗಳ ಬೆಲೆಯಲ್ಲಿ ಶೇ 15 ರಿಯಾಯ್ತಿ, ಮೇಕಿಂಗ್‌ ಚಾರ್ಜಸ್‌ನಲ್ಲಿ  ಶೇ 25 ರಷ್ಟು ಕಡಿತ ನೀಡಲಾಗುವುದು. ಚಿನ್ನದ ನಾಣ್ಯಗಳಿಗೆ ವೇಸ್ಟೇಜ್‌ ಚಾರ್ಜ್‌ಸ್‌ ಇರುವುದಿಲ್ಲ. ತಮ್ಮ ಮೆಚ್ಚಿನ ಆಭರಣಗಳನ್ನು ಗ್ರಾಹಕರು ಮುಂಗಡ ಕಾದಿರಿಸಬಹುದು.

ದೈನಂದಿನ ಬಳಕೆಗೆ ಸೂಕ್ತವಾಗುವ ಹಗುರ ಆಭರಣಗಳ ವಿವಿಧ ವಿನ್ಯಾಸದ ಸಂಗ್ರಹ ಇಲ್ಲಿದೆ. ಇವುಗಳ ಬೆಲೆ ₹5,499 ರಿಂದ ಆರಂಭವಾಗುತ್ತವೆ.

ಇವುಗಳನ್ನು www.oriana.com ಗೆ ಭೇಟಿ ನೀಡಿ ಮನೆಯಿಂದಲೇ ಖರೀದಿಸಬಹುದು. ಚಿನ್ನ ಮತ್ತು ವಜ್ರಾಭರಣಗಳಿಗೆ ‘ಗೋಲ್ಡನ್ ಇಲೆವೆನ್‌‘ ಹಾಗೂ ‘ಡೈಮಂಡ್‌ ಇಲೆವೆನ್‌’ ಖರೀದಿ ಯೋಜನೆಗಳನ್ನೂ ಪರಿಚಯಿಸಿದೆ.

ರಿಲಯನ್ಸ್ ಜ್ಯುವೆಲ್ಸ್ 
‘ಪ್ರತಿದಿನವು ಪವಿತ್ರ ದಿನ’ ಎಂಬ ಘೋಷವಾಕ್ಯದೊಂದಿಗೆ ಏ.22ರವರೆಗೆ ತನ್ನ ಎಲ್ಲ ಮಳಿಗೆಗಳಲ್ಲಿ ಚಿನ್ನದ ಖರೀದಿಗೆ ವಿಶೇಷ ಕೊಡುಗೆ ನೀಡಿದೆ. ಚಿನ್ನದ ಆಭರಣಗಳ ಮೇಕಿಂಗ್ ಮೇಲೆ ಶೇ 40, ನಾಣ್ಯಗಳ ಮೇಕಿಂಗ್ ಮೇಲೆ ಶೇ 50 ಹಾಗೂ ವಜ್ರದ ಆಭರಣಗಳ ಮೇಕಿಂಗ್ ಮೇಲೆ ಶೇ 75 ರಷ್ಟು ರಿಯಾಯ್ತಿ ಘೋಷಿಸಿದೆ. ಹಳೆಯ ಚಿನ್ನದ ಆಭರಣಗಳನ್ನು ವಿನಿಮಯ, ಹೊಸ ಚಿನ್ನ ಮತ್ತು ವಜ್ರದ ಆಭರಣಗಳ ಖರೀದಿಗೆ ಯಾವುದೇ ಕಡಿತ ಇಲ್ಲ. ಮಳಿಗೆಯಲ್ಲಿ ಎಸ್‌ಬಿಐ ಕಾರ್ಡ್‌ಗಳ ಮೇಲೆ ಏ.18 ರವರೆಗೆ ಶೇ 5 ರಷ್ಟು ಕ್ಯಾಷ್‌ಬ್ಯಾಕ್‌ ಆಫರ್ ಸಿಗಲಿದೆ.

ತನಿಷ್ಕ್‌
ಚಿನ್ನ ಮತ್ತು ವಜ್ರದ ಆಭರಣಗಳ ಮೇಲೆ ಶೇ 25 ರವರೆಗೆ ರಿಯಾಯ್ತಿ ನೀಡಿದೆ. ಈ ಕೊಡುಗೆ ಏ.18 ರವರೆಗೆ ಇರಲಿದೆ. ಹಳೆಯ ಆಭರಣಗಳ ವಿನಿಮಯಕ್ಕೆ ಪೂರ್ಣ ಮೌಲ್ಯ ನೀಡುತ್ತಿದೆ.

ಆಕರ್ಷಕ ವಿನ್ಯಾಸಗಳ ಅಸಂಖ್ಯ ಆಭರಣಗಳ ಸಂಗ್ರಹ ಇಲ್ಲಿದೆ. ಆಭರಣಗಳ ಬೆಲೆ ₹10,000 ದಿಂದ ಆರಂಭವಾಗುತ್ತದೆ. ‘ಮಂಗಳಂ’ ಹೆಸರಿನಲ್ಲಿ ನವೀನ ಆಭರಣಗಳ ಸಂಗ್ರಹವನ್ನು ಸಂಸ್ಥೆ ಆರಂಭಿಸಲಿದೆ. ‘ರಿವಾಹ್‌’ ಕೊಡುಗೆಯಲ್ಲಿ ಮದುವೆಯ ಆಭರಣಗಳ ಖರೀದಿಗೆ ವಿಶೇಷ ರಿಯಾಯ್ತಿ ಇದೆ.

ಕಲ್ಯಾಣ ಜುವೆಲ್ಲರ್ಸ್‌
ಚಿನ್ನ ಖರೀದಿಸುವ 25 ಅದೃಷ್ಟಶಾಲಿ ವಿಜೇತರಿಗೆ ಮರ್ಸಿಡಿಸ್ ಬೆಂಜ್‌ ಗೆಲ್ಲುವ ಅವಕಾಶವನ್ನು ಕಲ್ಯಾಣ ಜುವೆಲ್ಲರ್ಸ್‌ ನೀಡಿದೆ. ಈ ಲಕ್ಕಿ ಡ್ರಾ ವ್ಯಾಪ್ತಿಗೆ ಬರಲು ಗ್ರಾಹಕರು ಕನಿಷ್ಠ ₹5,000 ಮೌಲ್ಯದ ಆಭರಣ ಖರೀದಿಸಿ ಕೂಪನ್‌ ಪಡೆಯಬೇಕು. ₹25,000 ಮೌಲ್ಯದ ಆಭರಣ ಖರೀದಿಸುವವರು ಉಚಿತ ಚಿನ್ನದ ನಾಣ್ಯ ಪಡೆಯಬಹುದು. ಈ ಕೊಡುಗೆಗೆ ಕಲ್ಯಾಣ ಮಳಿಗೆಯ ಸಂಗ್ರಹಕ್ಕೆ ಈಚೆಗೆ ಸೇರ್ಪಡೆಯಾದ ಮುಹೂರ್ತ್‌ ಸರಣಿಯ ಆಭರಣಗಳು ಅನ್ವಯವಾಗಲಿದೆ. 

ಫಾರೆವರ್‌ಮಾರ್ಕ್‌
‘ಫಾರೆವರ್‌ಮಾರ್ಕ್’ ವ‌ಜ್ರದ ಬ್ರ್ಯಾಂಡ್, ವಿವಿಧ ವಿನ್ಯಾಸಗಳ ಮೂಗಿನ ಬೊಟ್ಟುಗಳನ್ನು ಪರಿಚಯಿಸಿದೆ. ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸದ ಮೂಗುಬೊಟ್ಟುಗಳ ದೊಡ್ಡ ಸಂಗ್ರಹ ಇಲ್ಲಿದೆ. ವಜ್ರದ ಕಿವಿಯೋಲೆಗಳು, ಬ್ರೇಸ್‌ಲೆಟ್‌ಗಳ ನವೀನ ವಿನ್ಯಾಸಗಳೂ ಇಲ್ಲಿ ಲಭ್ಯ ಇರಲಿವೆ.

ಕೃಷ್ಣಯ್ಯ ಚೆಟ್ಟಿ
‘ಕೃಷ್ಣಯ್ಯ ಚೆಟ್ಟಿ ಗ್ರೂಪ್‌ ಆಫ್ ಜ್ಯೂವೆಲ್ಲರ್ಸ್’ ಅಕ್ಷಯ ತೃತೀಯಕ್ಕೆ ಕುಬೇರ ನಿಧಿ ಯಂತ್ರವನ್ನು ಪರಿಚಯಿಸಿದೆ. ಬೆಳ್ಳಿಯಿಂದ ತಯಾರಾದ ಮನಿ ಬಾಕ್ಸ್‌ ಜೊತೆಗೆ 22 ಕ್ಯಾರೇಟ್‌ ಚಿನ್ನದ ಕುಬೇರ ಮೂರ್ತಿ ಇದೆ.

ನವರತನ್‌
‘ನವರತನ್‌ ಜುವೆಲ್ಲರ್ಸ್‌’ ಗ್ರಾಹಕರಿಗೆ ಮೂರು ವಿಭಿನ್ನ ಕೊಡುಗೆಗಳನ್ನು ನೀಡಿದೆ.

1 ಗ್ರಾಂ ಚಿನ್ನದ ಖರೀದಿಗೆ 1 ಗ್ರಾಂ ಬೆಳ್ಳಿ ಉಚಿತ. 1 ಕ್ಯಾರೇಟ್‌ ವಜ್ರದ ಖರೀದಿಗೆ 1 ಗ್ರಾಂ ಚಿನ್ನ ಹಾಗೂ 1 ಕೆ.ಜಿ. ಬೆಳ್ಳಿಯ ಖರೀದಿಗೆ 25 ಗ್ರಾಂ ಬೆಳ್ಳಿಯನ್ನು ಉಚಿತವಾಗಿ ನೀಡುತ್ತಿದೆ. ಈ ಕೊಡುಗೆ ಏಪ್ರಿಲ್‌ 29 ರವರೆಗೆ ಇರಲಿದೆ.

ಭೀಮಾ
‘ಭೀಮಾ ಜ್ಯುವೆಲ್ಲರ್ಸ್‌’  ತಮ್ಮ ಮೆಚ್ಚಿನ ಆಭರಣ ಖರೀದಿಗೆ ಗ್ರಾಹಕರು ಮುಂಗಡ ಕಾದಿರಿಸಬಹುದು. ಚಿನ್ನದ ಆಭರಣ ಖರೀದಿಗೆ 1 ಚಿನ್ನದ ನಾಣ್ಯ ಹಾಗೂ ವಜ್ರದ ಆಭರಣ ಖರೀದಿಗೆ 2 ಚಿನ್ನದ ನಾಣ್ಯಗಳನ್ನು ಉಚಿತವಾಗಿ ನೀಡುತ್ತಿದೆ. ಈ ಕೊಡುಗೆ ಏಪ್ರಿಲ್‌ 20 ರವರೆಗೆ ಇರಲಿದೆ.  

ಕ್ಯಾರೇಟ್‌ಲೇನ್
‘ಕ್ಯಾರೇಟ್‌ಲೇನ್‌’ ನವೀನ ವಿನ್ಯಾಸದ ಒಡವೆಗಳ ಸಂಗ್ರಹ ಇಲ್ಲಿದೆ. ಬಹುವಿನ್ಯಾಸದ ಪದಕಗಳು, ಕಿವಿಯೋಲೆಗಳನ್ನು ಪರಿಚಯಿಸಿದೆ. ಸಂಸ್ಥೆಯು ಚಿನ್ನದ ಒಡವೆಗಳ ಮೇಕಿಂಗ್‌ ಮೇಲೆ ಶೇ. 25 ರಷ್ಟು ರಿಯಾಯಿತಿ ಘೋಷಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT