ಶನಿವಾರ, ಡಿಸೆಂಬರ್ 7, 2019
24 °C

‘ಹಿಲರಿ ಸೋಲಿಗೆ ತನಿಖೆ ಕಾರಣ’

ಎಎಫ್‌ಪಿ Updated:

ಅಕ್ಷರ ಗಾತ್ರ : | |

‘ಹಿಲರಿ ಸೋಲಿಗೆ ತನಿಖೆ ಕಾರಣ’

ವಾಷಿಂಗ್ಟನ್: ಹಿಲರಿ ಕ್ಲಿಂಟನ್ ಅವರು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಆಗಿದ್ದಾಗ ನಾನು ನಿರ್ವಹಿಸುತ್ತಿದ್ದ ಖಾಸಗಿ ಇ-ಮೇಲ್ ಸರ್ವರ್ ಅನ್ನು ದುರ್ಬಳಕೆ ಮಾಡಿಕೊಂಡ ಕುರಿತು ತನಿಖೆಗೆ ಆದೇಶಿಸಿದ್ದು ಚುನಾವಣೆಯಲ್ಲಿ ಅವರಿಗೆ ಹಿನ್ನಡೆಯಾಗಲು ಕಾರಣವಾಯಿತು ಎಂದು ಎಫ್‌ಬಿಐನ ಮಾಜಿ ಮುಖ್ಯಸ್ಥ ಜೇಮ್ಸ್ ಕೊಮೇ ಹೇಳಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೇಮ್ಸ್ ಅವರನ್ನು ಕಳೆದ ವರ್ಷ ವಜಾ ಮಾಡಿದ್ದರು. 2016ರ ಅಧ್ಯಕ್ಷೀಯ ಚುನಾವಣೆಗೆ ಹನ್ನೊಂದು ದಿನಗಳು ಬಾಕಿ ಇರುವಾಗ ಜೇಮ್ಸ್ ಅವರು ಹಿಲರಿ ವಿರುದ್ಧ ತನಿಖೆಗೆ ಆದೇಶಿಸಿದ್ದರು.

‘ಟ್ರಂಪ್ ಅವರ ವಿರುದ್ಧ ಹಿಲರಿ ಗೆಲ್ಲುವುದು ಬಹುತೇಕ ಖಚಿತವಾಗಿತ್ತು. ಒಂದು ವೇಳೆ ಇ-ಮೇಲ್ ಸರ್ವರ್ ದುರ್ಬಳಕೆ ವಿಚಾರವನ್ನು ನಾನು ಅಮೆರಿಕದ ಜನರಿಂದ ಮುಚ್ಚಿಟ್ಟಿದ್ದರೆ ಹಿಲರಿ ಆಯ್ಕೆಯು ನ್ಯಾಯಸಮ್ಮತವಲ್ಲ ಎಂಬ ಆರೋಪ ಮುಂದೊಮ್ಮೆ ಬರುವ ಸಾಧ್ಯತೆ ಇತ್ತು’ ಎಂದು ಎಬಿಸಿಗೆ ಭಾನುವಾರ ನೀಡಿದ ಸಂದರ್ಶನದಲ್ಲಿ ಜೇಮ್ಸ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)