ವಿದೇಶ ಪ್ರವಾಸಕ್ಕೆ ಅನುಮತಿ

7

ವಿದೇಶ ಪ್ರವಾಸಕ್ಕೆ ಅನುಮತಿ

Published:
Updated:

ನವದೆಹಲಿ: ಶಿಶುಪಾಲನೆ ರಜೆ ಅವಧಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ವಿದೇಶಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಕೇಂದ್ರ ಸಿಬ್ಬಂದಿ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಶಿಶುಪಾಲನೆ ರಜೆ ಅವಧಿಯಲ್ಲೂ ರಜಾ ಪ್ರಯಾಣ ಭತ್ಯೆ (ಎಲ್‌ಟಿಸಿ) ಪಡೆಯಬಹುದು. ಮಗುವಿನ ಪೋಷಣೆ ಸಂದರ್ಭದಲ್ಲಿ ನೌಕರರು ವಿದೇಶ ಪ್ರವಾಸಕ್ಕೆ ಹೋಗುವುದಾದರೆ ಸಂಬಂಧಪಟ್ಟ ಇಲಾಖೆಯಿಂದ ಮುಂಚಿತವಾಗಿಯೇ ಅನುಮತಿ ಪಡೆಯಬೇಕು.

ಈಗಿರುವ ನಿಯಮಗಳ ಪ್ರಕಾರ ಮಹಿಳಾ ಉದ್ಯೋಗಿಗಳು ಗರಿಷ್ಠ ಎರಡು ವರ್ಷ ಶಿಶುಪಾಲನೆ ರಜೆ ಪಡೆಯಬಹುದು ಆದರೆ, ಮಗುವಿಗೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಈ ರಜೆ ಪಡೆಯಲು ಅವಕಾಶ ಇರುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry