ಮಂಗಳವಾರ, ಜೂಲೈ 7, 2020
24 °C

ಬ್ರೆಜಿಲ್‌ ಕಪ್‌ ಗೆಲ್ಲುವ ನೆಚ್ಚಿನ ತಂಡ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬ್ರೆಜಿಲ್‌ ಕಪ್‌ ಗೆಲ್ಲುವ ನೆಚ್ಚಿನ ತಂಡ

ದುಬೈ: ಜೂನ್‌ನಲ್ಲಿ ಆರಂಭವಾಗುವ ಫಿಫಾ ಫುಟ್‌ಬಾಲ್‌ ವಿಶ್ವಕಪ್‌ನಲ್ಲಿ ಬ್ರೆಜಿಲ್‌ ತಂಡ ಗೆಲ್ಲುವ ವಿಶ್ವಾಸವಿದೆ ಎಂದು ಆ ರಾಷ್ಟ್ರದ ಹಿರಿಯ ಫುಟ್‌ಬಾಲ್‌ ಆಟಗಾರ ಪೆಲೆ ಹೇಳಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬ್ರೆಜಿಲ್‌ನ ನೇಮರ್‌ ಮೇಲೆ ಹೆಚ್ಚಿನ ಭರವಸೆ ಇದೆ ಎಂದು ತಿಳಿಸಿದ್ದಾರೆ.

ರಷ್ಯಾದಲ್ಲಿ ನಡೆಯುವ ಈ ಸಲದ ವಿಶ್ವಕಪ್‌ನಲ್ಲಿ ಬ್ರೆಜಿಲ್‌ ತಂಡವನ್ನು ನೇಮರ್‌ ಮುನ್ನೆಡಸಬಹುದು ಎಂದು ಅವರು ತಿಳಿಸಿದ್ದಾರೆ.

‘ಈ ಸಲದ ವಿಶ್ವಕಪ್‌ನಲ್ಲಿ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ, ವಿಶ್ವಕಪ್‌ ಆರಂಭವಾಗುವ ಹೊತ್ತಿಗೆ ನೇಮರ್‌ ಗುಣಮುಖರಾಗಲಿದ್ದಾರೆ. ಅವರ ಗಾಯವು ಅಂತಹ ಗಂಭೀರ ಸ್ವರೂಪದ್ದಲ್ಲ’ ಎಂದೂ ತಿಳಿಸಿದ್ದಾರೆ.

‘ಆಟಗಾರರಲ್ಲಿ ವಿಶ್ವಾಸ ತುಂಬಲು ತಂಡದ ನೂತನ ಕೋಚ್‌ ಟಿಟೆ ಅವರು ಹಲವು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ನಮ್ಮಲ್ಲಿ ಶ್ರೇಷ್ಠ ದರ್ಜೆಯ ಆಟಗಾರರಿದ್ದಾರೆ. ಆದರೆ, ಒಂದು ತಂಡವಾಗಿ ಎದುರಾಳಿಯ ಸವಾಲನ್ನು ಮೆಟ್ಟಿ ನಿಲ್ಲುವುದು ಅಗತ್ಯ’ ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ. 

‘ಅರ್ಜೆಂಟಿನಾ, ಜರ್ಮನಿ, ಫ್ರಾನ್ಸ್‌ ಹಾಗೂ ಇಂಗ್ಲೆಂಡ್‌ ತಂಡಗಳು ಈ ಸಲದ ಕಪ್‌ ಗೆಲ್ಲುವ ಸಾಮರ್ಥ್ಯ ಹೊಂದಿವೆ. ಆದರೂ, ಫುಟ್‌ಬಾಲ್‌ ಹಲವು ಅಚ್ಚರಿಗಳಿಂದ ಕೂಡಿದ ಆಟ’ ಎಂದು ತಿಳಿಸಿದ್ದಾರೆ.

ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನೇಮರ್‌ ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.