ಪ್ಲಾಸ್ಟಿಕ್‌ ಚೀಲ: ನಿಯಮ ಬದಲು

7

ಪ್ಲಾಸ್ಟಿಕ್‌ ಚೀಲ: ನಿಯಮ ಬದಲು

Published:
Updated:

ನವದೆಹಲಿ: ಗ್ರಾಹಕರಿಗೆ ಪ್ಲಾಸ್ಟಿಕ್‌ ಚೀಲ ನೀಡುವ ಚಿಲ್ಲರೆ ವ್ಯಾಪಾರಿಗಳು ಮತ್ತು ಸಣ್ಣ ವರ್ತಕರಿಂದ ವಾರ್ಷಿಕ ₹48 ಸಾವಿರ ಶುಲ್ಕ ಸಂಗ್ರಹಿಸುವ ಪ್ರಸ್ತಾವವನ್ನು ಕೇಂದ್ರ ಪರಿಸರ ಸಚಿವಾಲಯ ಕೈಬಿಟ್ಟಿದೆ.

ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ನಿಯಮಗಳು 2016ಕ್ಕೆ ಕೆಲವು ತಿದ್ದುಪಡಿ ತಂದು ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. ಆದರೆ ಶುಲ್ಕ ವಿಧಿಸುವ ಪ್ರಸ್ತಾವವನ್ನು ಕೈಬಿಡಲಾಗಿದೆ.

2016ರ ನಿಯಮ ಪ್ರಕಾರ, ಗ್ರಾಹಕರಿಗೆ ಪ್ಲಾಸ್ಟಿಕ್‌ ಚೀಲ ಕೊಡಲು ಬಯಸುವ ಚಿಲ್ಲರೆ ವ್ಯಾಪಾರಿಗಳು ಮತ್ತು ಬೀದಿ ವ್ಯಾಪಾರಿಗಳು ಸ್ಥಳೀಯಾಡಳಿತ ಸಂಸ್ಥೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಈ ವ್ಯಾಪಾರಿಗಳು ವಾರ್ಷಿಕ ಶುಲ್ಕವಾಗಿ ₹48 ಸಾವಿರ (ತಿಂಗಳಿಗೆ ₹4 ಸಾವಿರ) ಪಾವತಿಸಬೇಕು.

ಬಳಸಿದ ಪ್ಲಾಸ್ಟಿಕ್‌ ಚೀಲಗಳ ವಿಲೇವಾರಿಗೆ ಯಾವುದೇ ವ್ಯವಸ್ಥೆ ಇಲ್ಲ. ಹಾಗಾಗಿ ಪ್ಲಾಸ್ಟಿಕ್‌ ಚೀಲಗಳು ಪರಿಸರಕ್ಕೆ ಅತಿ ದೊಡ್ಡ ಅಪಾಯವಾಗಿವೆ. ಪ್ಲಾಸ್ಟಿಕ್‌ ಚೀಲ ಬಳಕೆ ಕಡಿಮೆಗೊಳಿಸುವ ಉದ್ದೇಶದಿಂದ 2016ರ ನಿಯಮಗಳನ್ನು ರೂಪಿಸಲಾಗಿತ್ತು. ಈ ನಿಯಮದ ಅನ್ವಯ ನೋಂದಣಿ ಮಾಡಿಕೊಳ್ಳುವ ವ್ಯಾಪಾರಿಗಳು ‘ಗ್ರಾಹಕರು ಹಣ ನೀಡಿದರೆ ಮಾತ್ರ ಪ್ಲಾಸ್ಟಿಕ್‌ ಚೀಲ ಕೊಡಲಾಗುವುದು’ ಎಂಬ ಫಲಕವನ್ನು ಪ್ರದರ್ಶಿಸಬೇಕು.

ಆದರೆ, ಈ ನಿಯಮಗಳ ವಿರುದ್ಧ ಪರಿಸರ ಸಚಿವಾಲಯಕ್ಕೆ ಹಲವು ದೂರುಗಳು ಬಂದಿವೆ. ಹಾಗಾಗಿ ನಿಯಮಗಳ ಪರಾಮರ್ಶೆಗೆ ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ವರದಿಯ ಆಧಾರದಲ್ಲಿ ನಿಯಮವನ್ನು ಪರಿಷ್ಕರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry