ಶನಿವಾರ, ಜೂನ್ 6, 2020
27 °C

ಕೈ ತಪ್ಪಿದ ಕಾಂಗ್ರೆಸ್‌, ಬಿಜೆಪಿ ಟಿಕೆಟ್; ರಾಜ್ಯದ ಹಲವೆಡೆ ಮುಂದುವರಿದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈ ತಪ್ಪಿದ ಕಾಂಗ್ರೆಸ್‌, ಬಿಜೆಪಿ ಟಿಕೆಟ್; ರಾಜ್ಯದ ಹಲವೆಡೆ ಮುಂದುವರಿದ ಪ್ರತಿಭಟನೆ

ದಾವಣಗೆರೆ: ಜಗಳೂರು ಕ್ಷೇತ್ರದಿಂದ ಶಾಸಕ ಎಚ್.ಪಿ.ರಾಜೇಶ್ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಅವರ ಬೆಂಬಲಿಗರು ಮಂಗಳವಾರ ಇಲ್ಲಿನ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಜಗಳೂರಿನಿಂದ ಬಂದಿದ್ದ ಸಾವಿರಾರು ಕಾರ್ಯಕರ್ತರು ಗಾಂಧಿವೃತ್ತದಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ರಾಜೇಶ್ ಅವರಿಗೇ ಬಿ ಫಾರಂ ಕೊಡಬೇಕು ಎಂದು ಘೋಷಣೆ ಕೂಗುತ್ತಾ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನಿವಾಸದ ಸಮೀಪ ಶಾಸಕ ರಾಜೇಶ್ ಬೆಂಬಲಿಗರು ಪ್ರತಿಭಟನೆ ನಡೆಸಿದರು.

* ಸಂಗಮೇಶ ನಿರಾಣಿಗೆ ಬಿಜೆಪಿ ಟಿಕೆಟ್‌ ನೀಡಲು ಬೆಂಬಲಿಗರ ಆಗ್ರಹ

ಬಾಗಲಕೋಟೆ: ಉದ್ಯಮಿ ಸಂಗಮೇಶ ನಿರಾಣಿಗೆ ಬಿಜೆಪಿ ಟಿಕೆಟ್ ನೀಡುವಂತೆ ಆಗ್ರಹಿಸಿ ಬೆಂಬಲಿಗರು ಜಮಖಂಡಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಬೆಂಬಲಿಗರಲ್ಲಿ ಕೆಲವರು ಬಹುಮಹಡಿ ಕಟ್ಟಡದಿಂದ ಬಿದ್ದು ಅತ್ಮಹತ್ಯೆಗೆ ಯತ್ನಿಸಿದ ಹಾಗೂ ಸೀಮೆಎಣ್ಣೆ ಸುರಿದುಕೊಂಡ ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ ನಾಟಕೀಯ ಬೆಳವಣಿಗೆಯೂ ನಡೆಯಿತು.

ಪ್ರತಿಭಟನೆ ಹಿನ್ನೆಲೆಯಲ್ಲಿ ಜಮಖಂಡಿ ನಗರದ ದೇಸಾಯಿ ಸರ್ಕಲ್ ಬಳಿ ಸಾವಿರಾರು ಬೆಂಬಲಿಗರು ಜಮಾವಣೆಗೊಂಡಿದ್ದಾರೆ.

ಜಮಖಂಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿಗೆ ಕೊಡಲಾಗಿದೆ.

ಸಂಗಮೇಶ್ ಮಾಜಿ ಸಚಿವ ಮುರುಗೇಶ್ ನಿರಾಣಿ ಸಹೋದರ. ಅವರು ಜಮಖಂಡಿ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಮುರುಗೇಶ ನಿರಾಣಿಗೆ ಬೀಳಗಿಯಿಂದ ಟಿಕೆಟ್ ನೀಡಲಾಗಿದೆ.

ಜಗಳೂರಿನಿಂದ ಪುಷ್ಪಾ ಲಕ್ಷ್ಮಣಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಲಾಗಿದೆ.

* ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ತಪ್ಪಿರುವುದಕ್ಕೆ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ಅವರ ಬೆಂಬಲಿಗರು ಮಂಗಳವಾರ ಮಸ್ಕಿಯಲ್ಲಿ ಪ್ರತಿಭಟನೆ ನಡೆಸಿದರು

* ಬಳ್ಳಾರಿ: ಕೂಡ್ಲಿಗಿಯಲ್ಲಿ ಗುಜ್ಜಲ್ ರಘು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಕೂಡ್ಲಿಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಷದ ಮದಕರಿ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.