ಗುರುವಾರ , ಡಿಸೆಂಬರ್ 12, 2019
20 °C

ಚುನಾವಣೆ ವೇಳೆ ಹಂಚಲು ಅಕ್ರಮವಾಗಿ ಮದ್ಯ ಸಂಗ್ರಹ; ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆ ವೇಳೆ ಹಂಚಲು ಅಕ್ರಮವಾಗಿ ಮದ್ಯ ಸಂಗ್ರಹ; ಇಬ್ಬರ ಬಂಧನ

ಕಾರವಾರ: ಹಳಿಯಾಳ ತಾಲ್ಲೂಕಿನ ಬೆಳವಟಿಗಿ ಗ್ರಾಮದ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 450 ಲೀ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೋಮವಾರ ತಡರಾತ್ರಿ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಸಾಂಬಾಜಿ ಅಪ್ಪಯ್ಯ ಮಂಗನಗೌಡ (62) ಹಾಗೂ ಅವರ ಪುತ್ರ ಮೌಳೇಶ್ವರ (33) ಬಂಧಿತರು.

ಈ ಬಗ್ಗೆ ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಎಲ್.ಎ.ಮಂಜುನಾಥ, 'ಆರೋಪಿಗಳು ತಮ್ಮ ತೋಟದ ಮನೆಯ ಅಟ್ಟದಲ್ಲಿ ಗೋಲ್ಡನ್ ಏಸ್ ಫೈಲ್ ವಿಸ್ಕಿಯ 50 ಕೇಸ್ ಗಳನ್ನು ಚುನಾವಣಾ ಸಂದರ್ಭದಲ್ಲಿ ಹಂಚುವ ಸಲುವಾಗಿ ಸಂಗ್ರಹಿಸಿಟ್ಟುಕೊಂಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ನೀಡಿದ ಮಾಹಿತಿ ಪ್ರಕಾರ ದಾಂಡೇಲಿ ಅಬಕಾರಿ ನಿರೀಕ್ಷಕಿ ಕವಿತಾ ಮತ್ತು ಅವರ ತಂಡ ದಾಳಿ ಮಾಡಿತು. ತಡರಾತ್ರಿ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳನ್ನು ಮುಂಜಾನೆ ಬಂಧಿಸಲಾಯಿತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ' ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)