ಮಂಗಳವಾರ, ಜೂಲೈ 7, 2020
24 °C

ಹಾಸನ ಜಿಲ್ಲಾಧಿಕಾರಿ ವರ್ಗಾವಣೆ ಸಂಘರ್ಷಕ್ಕೆ ತೆರೆ; ಡಿ.ರಂದೀಪ್‌ ಅಧಿಕಾರ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ ಜಿಲ್ಲಾಧಿಕಾರಿ ವರ್ಗಾವಣೆ ಸಂಘರ್ಷಕ್ಕೆ ತೆರೆ; ಡಿ.ರಂದೀಪ್‌ ಅಧಿಕಾರ ಸ್ವೀಕಾರ

ಹಾಸನ: ಜಿಲ್ಲಾಧಿಕಾರಿ ವರ್ಗಾವಣೆ ಸಂಘರ್ಷಕ್ಕೆ ತೆರೆ ಬಿದ್ದಿದ್ದು, ಡಿ.ರಂದೀಪ್ ಅಧಿಕಾರ ವಹಿಸಿಕೊಂಡಿದ್ದಾರೆ.

ರಂದೀಪ್‌ ಎರಡು ತಿಂಗಳ ಹಿಂದೆಯೇ ಹಾಸನಕ್ಕೆ ವರ್ಗವಾಗಿದ್ದರು.

ಸರ್ಕಾರ ಮಾಡಿರುವ ವರ್ಗಾವಣೆಯನ್ನು ಪ್ರಶ್ನಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಿಎಟಿ ಮತ್ತು ಹೈ‌ಕೋರ್ಟ್ ಮೆಟ್ಟಿಲೇರಿದ ಕಾರಣ ಅಧಿಕಾರ ಸ್ವೀಕಾರಕ್ಕೆ ಅಡ್ಡಿಯಾಗಿತ್ತು.

ನೂತನ ಡಿಸಿ ಇಂದು ಹಾಸನಾಂಬೆ ದೇವಿಗೆ ಪೂಜೆ ಸಲ್ಲಿಸಿದ ನಂತರ ಅಧಿಕಾರ ಸ್ವೀಕರಿಸಿದರು.

ರೋಹಿಣಿ ಸಿಂಧೂರಿ ಅಧಿಕಾರ ಹಸ್ತಾಂತರಕ್ಕೆ ಬರಲಿಲ್ಲ. ಎಡಿಸಿ ಪೂರ್ಣಿಮಾ ಅವರಿಂದ ರಂದೀಪ್‌ ಅಧಿಕಾರ ಸ್ವೀಕರಿಸಿದರು.

* ಇವನ್ನೂ ಓದಿ...

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಆದೇಶ ಎತ್ತಿ ಹಿಡಿದ ಸಿಎಟಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.